Kundapra.com ಕುಂದಾಪ್ರ ಡಾಟ್ ಕಾಂ

ವ್ಯಕ್ತಿ ತಿಳಿದಷ್ಟೂ ಬೆಳೆಯುತ್ತಾನೆ: ಯು.ಸಿ. ಹೊಳ್ಳ

ಬೈಂದೂರು: ಕಲಾವಿದರು ರೇಖೆ ಹಾಗೂ ಬಣ್ಣಗಳ ಮೂಲಕ ಮೂಡಿಸುವ ಚಿತ್ರವು ವಿಶಿಷ್ಟವಾದ ಅರ್ಥವನ್ನು ನೀಡುವುದಲ್ಲದೇ ವಿವಿಧ ಭಾವನೆಯನ್ನು ಮೂಡಿಸುತ್ತದೆ. ಒಂದು ಚಿತ್ರದಲ್ಲಿನ ರೇಖೆಗಳ ವಿನ್ಯಾಸ ಹಾಗೂ ವರ್ಣ ಸಂಯೋಜನೆ ಅದರ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ, ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು.

ಅವರು ಯುಸ್ಕೋರ್ಡ್ ಟ್ರಸ್ಟ್ (ರಿ) ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಐದು ದಿನಗಳ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಎರಡನೇ ದಿನ ವರ್ಷಚಿತ್ರ ವೈಭವವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ವ್ಯಕ್ತಿಯನ್ನು ಯಶಸ್ಸಿನೆಡೆಗೆ ಕೊಂಡೊಯ್ದರೇ, ತಿಳಿದಿದ್ದನ್ನು ಇತರರಿಗೂ ಹಂಚುವ ಪ್ರವೃತ್ತಿ ಆತನನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯತ್ತದೆ. ಪ್ರಪಂಚದ ಅದ್ಭುತವಾದ ಕ್ರೀಯಾ ಶಕ್ತಿಯನ್ನು ಬೆರಗುಗಣ್ಣಿನಿಂದ ನೋಡಿದರೆ ಮಾತ್ರ ಅದನ್ನು ಅನುಭವಿಸಲು ಸಾಧ್ಯ ಎಂದರು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು vಮುಖ್ಯ ಅಥಿತಿಗಳಾಗಿ ಚಿತ್ತಾರ ಉಪ್ಪುಂದದ ಮಂಜುನಾಥ ಮಯ್ಯ, ಸ. ಪ. ಪೂ. ಕಾಲೇಜು ಉಪ್ಪುಂದದ ಪ್ರಾಂಶುಪಾಲರಾದ ಸೀತಾರಾಮ ಮಯ್ಯ ಉಪಸ್ಥಿತರಿದ್ದರು.

ಯಸ್ಕೋರ್ಡ್ ಟ್ರಸ್ಟ್ ನ ಸುಧಾಕರ ಪಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಭಾರ ಉಪಪ್ರಾಂಶುಪಾಲ ವಿಘ್ನೇಶ್ವರ ಸ್ವಾಗತಿಸಿದರು. ಶಿಕ್ಷಕ ರಮೇಶ ಗೌಡ ಧನ್ಯವಾದಗೈದರು. ಶಿಕ್ಷಕ ಅಣ್ಣಪ್ಪ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಕಲಾವಿದರುಗಳಾದ ಮಂಜುನಾಥ ಮಯ್ಯ, ಕಾಳಪ್ಪ ಬಡಿಗೇರ, ತ್ರಿವಿಕ್ರಮ ರಾಮ್, ನರಸಿಂಹ ಆರ್. ಉಪ್ಪುಂದ, ಸುಪ್ರಿತ್ ಆಚಾರ್ಯ, ಸುರೇಶ್ ಹೆಮ್ಮಾಡಿ, ಗಿರೀಶ್ ಗಾಣಿಗ ಅವರುಗಳಿಂದ ಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ನಡೆಯಿತು.

Exit mobile version