Kundapra.com ಕುಂದಾಪ್ರ ಡಾಟ್ ಕಾಂ

ಬೆಳ್ವೆ: ಪತ್ನಿ ಮಕ್ಕಳನ್ನು ಕೊಂದು ವ್ಯಕ್ತಿ ನೇಣಿಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವ್ಯಕ್ತಿಯೋರ್ವ ಪತ್ನಿ‌ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಗ್ರಾಮದ ಸೂರ್ಗೊಳಿ ಎಂಬಲ್ಲಿ ನಡೆದಿದೆ.

ಮೃತರನ್ನು ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯನಾರಾಯಣ ಭಟ್ ಅಲ್ಸೆ (52), ಅವರ ಪತ್ನಿ ಮಾನಸ (50), ಪುತ್ರ ಸುಧೀಂದ್ರ (14), ಸುದೇಶ್ (8) ಎಂದು ಗುರುತಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ)

ಅಡುಗೆ ಭಟ್ಟರಾಗಿದ್ದ ಸೂರ್ಯನಾರಾಯಣ ಭಟ್ ತನ್ನ ಮನೆಯಲ್ಲಿಯೇ ಪತ್ನಿ ಹಾಗೂ ಮಕ್ಕಳನ್ನು ಮಾರಕಾಯುಧದಿಂದ ಕೊಲೆಗೈದ ಬಳಿಕ ತಾನು ಅಲ್ಲಿಯೇ ನೇಣಿಗೆ ಶರಣಾಗಿರಬಹುದು. ನಿನ್ನೆ ರಾತ್ರಿ ಘಟನೆ ನಡರದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಬಗೆಗೆ ಇನ್ನಷ್ಟೇ ವಿವರ ತಿಳಿಯಬೇಕಿದೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version