Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ವೃತ್ತನಿರೀಕ್ಷಕರ ಕಛೇರಿಗೆ ಕಂಪ್ಯೂಟರ್ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ನೂತನ ವೃತ್ತನಿರೀಕ್ಷಕರ ಕಛೇರಿಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಕಂಪ್ಯೂಟರ್ ಕೊಡುಗೆ ನೀಡಲಾಯಿತು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಸದಸ್ಯರಾದ ರಾಘವೇಂದ್ರ ಪೂಜಾರಿ, ನರಸಿಂಹ ನಾಯಕ್, ನಾಗರಾಜ ಪೂಜಾರಿ, ಸ್ಥಳೀಯರಾದ ರಾಜೇಂದ್ರ ಬಿಜೂರು, ಸುಬ್ರಹ್ಮಣ್ಯ ಬಿಜೂರು ಹಾಗೂ ಠಾಣಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಇಲ್ಲಿ ನೋಡಿ – srivaralaxmitrust.com/

 

Exit mobile version