Site icon Kundapra.com ಕುಂದಾಪ್ರ ಡಾಟ್ ಕಾಂ

ಗಾಳಿ ಮಳೆಗೆ ಮನೆ ನೆಲಸಮ

ಬೈಂದೂರು: ಸಮೀಪದ ಕಲ್ಮಕ್ಕಿಯಲ್ಲಿ ಸಂಜೆ ಗಂಟೆ 4ರ ಸುಮಾರಿಗೆ ಬೀಸಿದ ಭಾರೀ ಸುಂಟರಗಾಳಿಗೆ ನೆಲ್ಸನ್ ಪಿ.ಜೆ. ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದೆ..

ನೆಲ್ಸನ್ ಅಂಗವಿಕಲರಾದರೂ ತಮ್ಮ ಜೀವನಕ್ಕೆ ಕೃಷಿಯನ್ನೆ ನಂಬಿ ಬದುಕುತ್ತಿದ್ದು, ಈಗ ವಾಸದ ಮನೆಬಿದ್ದು ಸಮಾರು 2ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದ್ದು, ಬಡ ಕುಟುಂಬಕ್ಕೆ ಸಿಡಿಲೆರಗಿದಂತಾಗಿದೆ. ಮನೆಯ ಕೋಣೆಯಲ್ಲಿದ್ದ ಮಡದಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಸಮಯವಾದ್ದರಿಂದ ಮಕ್ಕಳು ಮನೆಯಲ್ಲಿಲಿಲ್ಲ. ಹಾಗಾಗಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಕಳೆದ ವರ್ಷ ಇವರ ಮನೆ ವಿದ್ಯುತ್ ಶಾರ್ಟ್ ಸರ‍್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿತ್ತು. ಈ ಬಾರಿ ಸಾಲಮಾಡಿ ಪುನ: ಮನೆಕಟ್ಟಿದ್ದೂ ಬಿರುಗಾಳಿಗೆ ಸಿಕ್ಕಿ ನಾಶವಾಗಿದೆ. ಮಳೆಗಾಲವಾದ್ದರಿಂದ ದಿನ ಕಳೆಯುವುದು ಕಷ್ಟವಾಗಿದೆ.

 ಸ್ಥಳಕ್ಕಾಗಮಿಸಿದ ಬೈಂದೂರು ಗ್ರಾಮ ಲೆಕ್ಕಿಗ ಮಂಜು ಹಾನಿಯ ನಷ್ಟದ ವರದಿ ಮಾಡಿದ್ದಾರೆ. ಗ್ರಾಪಂ ಸದಸ್ಯ ಬಿ. ರಾಘವೇಂದ್ರ ಸ್ಥಳದಲ್ಲಿ ಇದ್ದು, ನೊಂದ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.

Exit mobile version