Kundapra.com ಕುಂದಾಪ್ರ ಡಾಟ್ ಕಾಂ

ನಾರಾಯಣ ವಿಶೇಷ ಮಕ್ಕಳ ಶಾಲೆ: ವೃತ್ತಿ ತರಬೇತಿ ಶಿಬಿರ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ರುಡ್‌ಸೆಡ್ ಬ್ರಹ್ಮಾವರ ಈ ಸಂಸ್ಥೆಗಳ ಜಂಟಿ ಅಶ್ರಯದಲ್ಲಿ ನಾರಾಯಣ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಮತ್ತು ಅವರ ಹೆತ್ತವರಿಗಾಗಿ ೧೦ ದಿನಗಳ ಕಾಲ ನಡೆದ ಬಟ್ಟೆ ಬ್ಯಾಗ್, ಪೆಪರ್ ಬ್ಯಾಗ್ ಮತ್ತು ಎನ್ವಲಪ್ ತಯಾರಿ ಕುರಿತು ವೃತ್ತಿ ತರಬೇತಿ ಶಿಬಿರ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.

ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್., ರುಡ್‌ಸೆಟ್ ನಿರ್ದೇಶಕರಾದ ಪಾಪ ನಾಯಕ್, ಉಪ್ಪಿನಕುದ್ರು ಗೊಂಬೆಮನೆಯ ಅಧ್ಯಕ್ಷರಾದ ಭಾಸ್ಕರ ಕೂಗ್ಗ ಕಾಮತ್, ರುಡ್‌ಸೆಡ್ ಉಪನ್ಯಾಸಕ ಸಂತೋಷ್, ತಲ್ಲೂರು ಪ್ಯಾಮಿಲಿ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಪ್ರೇಮ ವಂದಿಸಿದರು. ಟ್ರಸ್ಟಿವಸಂತ ಶ್ಯಾನುಭೋಗ ಅವರು ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಮಕ್ಕಳು ಮತ್ತು ಅವರ ಪೋಷಕರು ತಯಾರಿಸಿದ ಬಟ್ಟೆ ಬ್ಯಾಗ್ ಮತ್ತು ಪೇಪರ್ ಬ್ಯಾಗ್‌ಗಳು ಸಂಸ್ಥೆಯಲ್ಲಿ ಲಭ್ಯವಿರಲಿದೆ.

Exit mobile version