Site icon Kundapra.com ಕುಂದಾಪ್ರ ಡಾಟ್ ಕಾಂ

ಛಾವಣಿಯಿಂದ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು

ಕುಂದಾಪುರ: ಹಿರಿಯ ಕಾಂಗ್ರೇಸಿಗ, ಪುರಸಭೆಯ ಮಾಜಿ ಸದಸ್ಯ ರತ್ನಾಕರ ಶೇರುಗಾರ್‌ (66) ಅವರು ಗುರುವಾರ ಸಂಜೆ ಚರ್ಚ್‌ ರಸ್ತೆಯಲ್ಲಿ ತಮ್ಮನ ಮನೆಯ ಕಾಂಕ್ರಿಟ್‌ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಮನೆಯ ಆರ್‌.ಸಿ.ಸಿ ಛಾವಣಿಯಲ್ಲಿ ನೀರು ತುಂಬಿರುವುದನ್ನು ತೆರವುಗೊಳಿಸುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮೃತರು ಕುಂದಾಪುರ ವಿ.ಎಸ್‌.ಎಸ್‌. (ನಿ) ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದು, ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Exit mobile version