Site icon Kundapra.com ಕುಂದಾಪ್ರ ಡಾಟ್ ಕಾಂ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮರವಂತೆ ಜುಮ್ಮಾ ಮಸೀದಿ ಎದುರು ಶುಕ್ರವಾರ ನಾವುಂದ-ಮರವಂತೆ ಜಮಾತ್‌ನ ಸದಸ್ಯರು ಪ್ರತಿಭಟನೆ ನಡೆಸಿದರು.

ಮಾತನಾಡಿದ ಜಮಾತ್ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲಾ ಈ ಕಾಯ್ದೆಯು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಅಪಚಾರವೆಸಗುತ್ತದೆ. ಇದು ಒಂದು ನಿರ್ದಿಷ್ಟ ವರ್ಗವನ್ನು ಗುರಿಯಾಗಿರಿಸಿಕೊಂಡು ರಚಿಸಿದಂತೆ ಕಂಡುಬರುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಜಾರಿಗೊಳಿಸಬಾರದು ಎಂದರು. ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಕಾರ್ಯದರ್ಶಿ ಸತ್ತಾರ್, ಖಜಾಂಚಿ ಕೆ. ಪಿ. ಹುಸೇನ್ ಹಾಜಿ, ಮುತವಲ್ಲಿ ಬಿ.ಎ. ಸಯ್ಯದ್, ಪ್ರಮುಖರಾದ ಅಬ್ದುಲ್ ಹಮೀದ್ ಬಿ. ಎಚ್, ಮಾಣಿಕೊಳಲು ಅಬ್ಬಾಸ್, ಇರ್ಷಾದ್ ಕೋಯಾನಗರ, ಎನ್. ಸಿ. ಮೊಯ್ದಿನ್, ಬಿ. ಎಚ್. ಮೊಯ್ದಿನ್, ಸುಲೇಮಾನ್, ಇಮಾಮ್ ಅಬ್ದುಲ್ ಲತೀಫ್ ಫಾಲಿಲಿ, ವಕೀಲ ಇಲ್ಯಾಸ್ ನೇತೃತ್ವ ವಹಿಸಿದ್ದರು. ಜಮಾತ್‌ನ ಸರ್ವ ಸದಸ್ಯರು ಇದ್ದರು.

 

Exit mobile version