Kundapra.com ಕುಂದಾಪ್ರ ಡಾಟ್ ಕಾಂ

ಡಾ. ಅಸೋಡು ಅನಂತರಾಮ ಶೆಟ್ಟಿ ವೃತ್ತ ಹಾಗೂ ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಸೋಡು ಪ್ರೆಂಡ್ಸ್ ಅವರು ಆಯೋಜಿಸಿದ ಪ್ರೊ. ಡಾ. ಅಸೋಡು ಅನಂತರಾಮ ಶೆಟ್ಟಿ ವೃತ್ತ ಹಾಗೂ ಹೈಮಾಸ್ಟ್ ವಿದ್ಯುತ್ ದೀಪವನ್ನು ಹಂಗಳೂರಿನ ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಶ್ರೀ ಕೆ. ಆರ್. ನಾಯ್ಕ್ ಉದ್ಘಾಟಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎ. ಎ. ಶೆಟ್ಟಿಯವರು ಮಾತನಾಡಿ, ಹೆತ್ತವರು ಮಕ್ಕಳಿಗೆ ಓದಿನೊಂದಿಗೆ ಸಂಗೀತಾ, ಸಾಹಿತ್ಯ ಮತ್ತು ಕಲೆಗಳ ಕುರಿತು ಆಸಕ್ತಿಯನ್ನು ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ಭಾಷಾ ಮಾಧ್ಯಮ ತೊಡಕಾಗುವುದಿಲ್ಲ, ಆದರೆ ಓದಿನೊಂದಿಗೆ ಸಂಸ್ಕಾರಯುತವಾದ ಜೀವನ ಕೌಶಲ್ಯಗಳನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಅಸೋಡಿನ ಏಕೋಪಾಧ್ಯಾಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆದಿದ್ದು ನನಗೆ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯನಾಗಲು ಸಾಧ್ಯವಾಯಿತು. ಗುರುವಿನ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯಿಂದ ಯುವಜನತೆ ಮಾಹಾನ್ ಸಾಧನೆ ಮಾಡಲು ಸಾಧ್ಯ ಎಂದರು.

ಕಾಳಾವಾರ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸುಖಾನಂದ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅಸೋಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಚ್. ದಯಾನಂದ ಹೆಗ್ಡೆ, ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ದೇವಿಪ್ರಸಾದ ಶೆಟ್ಟಿ, ಶಾಲೆಯ ಎಸ್.ಡಿ.ಎಂ.ಸಿ ಆಧ್ಯಕ್ಷರಾದ ನಾಗರಾಜ್ ಶೆಟ್ಟಿಗಾರ್, ಉದ್ಯಮಿ ಅಜಿತ್ ಕುಮಾರ್ ಶೆಟ್ಟಿ, ಅಸೋಡು ಪ್ರೆಂಡ್ಸ್‌ನ ಅಧ್ಯಕ್ಷ ಶಿವಾನಂದ ಹೆಗ್ಡೆ ಉಪಸ್ಥಿತರಿದ್ದರು.

ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ದಿನಕರ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶೇಖರ ದೇವಾಡಿಗ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಆಚಾರ್ ಕ್ರೀಡಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸದಸ್ಯ ಉಮೇಶ್ ಪೂಜಾರಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ದಿ. ಸದಾಶಿವ ಶೆಟ್ಟಿ ತೋಟದಮನೆ ಅಸೋಡು ಈ ವೇದಿಕೆಯಲ್ಲಿ ಅಸೋಡು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರಸನ್ನ ಶೆಟ್ಟಿಯವರಿಂದ ಹಾಸ್ಯ ಚಟಾಕಿ ಹಾಗೂ ಕಲಾ ನರ್ತನ ಡಾನ್ಸ್ ಕ್ರೀವ್ ಜನ್ನಾಡಿ ಇವರಿಂದ ಡಾನ್ಸ್ ಧಮಾಕ ಕಾರ್ಯಕ್ರಮ ನಡೆಯುತು. ಡಿಜೆ ಸುಧಿ ಅವರ ಸಂಯೋಜನೆಯಲ್ಲಿ ಎ.ಕೆ. ಶೆಟ್ಟಿ ನಡೂರು ಕಾರ್ಯಕ್ರಮ ನಿರೂಪಿಸಿದರು.

Exit mobile version