Site icon Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸೂರ‍್ಯಗ್ರಹಣ ವೀಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವತಿಯಿಂದ ಖಗೋಳ ಕೌತುಕದ ಕಂಕಣ ಸೂರ‍್ಯಗ್ರಹಣವನ್ನು ವೀಕ್ಷಿಸಲು ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ದಶಕಗಳಿಗೊಮ್ಮೆ ನಡೆಯುವ ಬಾಹ್ಯಕಾಶದ ವಿಸ್ಮಯವನ್ನು ವೀಕ್ಷಿಸಿದರು. ಪ್ರೋಜೆಕ್ಟರ್ ಡಿಸ್‌ಪ್ಲೇಯ ಜತೆಯಲ್ಲಿ ಸೋಲಾರ್ ನೆಬ್ಯೂಲರ್ ಕನ್ನಡಕವನ್ನು ಧರಿಸಿ ವೀಕ್ಷಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ಶಶಿಧರ್ ಭಟ್ ವಿದ್ಯಾರ್ಥಿಗಳಿಗೆ ಸೂರ‍್ಯಗ್ರಹಣ ನಡೆಯುವ ಪರಿಯನ್ನು ಹಂತ ಹಂತವಾಗಿ ವಿವರಿಸಿದರು. ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ನಿಖಾಯದ ಡೀನ್ ರಮ್ಯ ರೈ ಪಿ.ಡಿ ಹಾಗೂ ಪದವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ನಿಶಾ ಹಾಜರಿದ್ದರು.

 

Exit mobile version