Kundapra.com ಕುಂದಾಪ್ರ ಡಾಟ್ ಕಾಂ

ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಆಜೆಕಾರು: ಎರಡು ದಶಕಗಳ ಸಾರ್ಥಕ ಸಂಭ್ರಮ ಕಂಡು ಮುಂದುವರಿಯುತ್ತಿರುವ ಅಜೆಕಾರು ಆದಿಗ್ರಾಮೋತ್ಸವದ ಪ್ರತಿಷ್ಠಿತ ರಾಜ್ಯಮಟ್ಟದ ಆದಿಗ್ರಾಮೋತ್ಸವ ಗೌರವವನ್ನು ವಾಗ್ಮಿ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಜನವರಿ 25 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿದ್ದಾರೆ ಎಂದು ಉತ್ಸವದ ರೂವಾರಿ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

ಕಲಾವಿದರಿಗೆ ಹಿರಿಯ ಸಾಧಕರಿಗೆ ನೀಡಲಾಗುವ ಅಜೆಕಾರು ಗ್ರಾಮ ಗೌರವಕ್ಕೆ ನಾದವೈಭವಂ ಉಡುಪಿ ವಾಸುದೇವ ಭಟ್ ಮತ್ತು ಸಮಾಜ ಸೇವಕ-ಉದ್ಯಮಿ ವಿಶ್ವನಾಥ ಶೆಣೈ ಅವರು ಪಾತ್ರರಾಗಲಿದ್ದಾರೆ.

17 ಮಂದಿಗೆ ಯುವ ಗೌರವ:
ಯುವ ಗೌರವಕ್ಕೆ ನಾಡಿನ ವಿವಿದ ಕಡೆಯ ೧೭ ಮಂದಿ ಯುವ ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಂದಾ ಪ್ರೇಮ್‌ಕುಮಾರ್-ಶಿಕಾರಿಪುರ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಮಂಗಳೂರು, ನಾಗರಾಜ ಗುರುಪುರ, ಮುಂಬಯಿ,ಜೆಸಿಂತಾ ಡಿಸೋಜಾ, ನಿಟ್ಟೆ, ಉಪನ್ಯಾಸಕಿ ಜ್ಯೋತಿ ಜ್ಯು.ಕಾಲೇಜ್, ಸುಜಾತ ಲಕ್ಷ್ಮಣ ಆಚಾರ್ಯ- ವರಂಗ, ಮಾಲಿನಿ.ಜೆ.ಶೆಟ್ಟಿ-ಹಿರ್ಗಾನ, ಸದಾನಂದ ಆಚಾರ್ಯ ನೂರಾಳಬೆಟ್ಟು, ಕಿಶೋರ್ ರೈ-ಉಜಿರೆ, ಡಾ.ರಕ್ಷಿತಾ ಕೋಟ್ಯಾನ್- ಅಜೆಕಾರು, ಪುಷ್ಪಾ ಅಂಗನವಾಡಿ ಶಿಕ್ಷಕಿ ಕಡ್ತಲ, ದಿನೇಶ ಆಚಾರ್ಯ ಆಲಿಬೆಟ್ಟು- ಅಜೆಕಾರು, ಅರುಣ್ ಶೆಟ್ಟಿಗಾರ್ -ಅಜೆಕಾರು ಅಜೆಕಾರು, ಪ್ರವೀಣ್ ದೇವಾಡಿಗ, ಅಜೆಕಾರು, ಪ್ರವೀಣ್ ಶೆಟ್ಟಿ, ಅಜೆಕಾರು, ದಿವ್ಯ ಪೂಜಾರಿ ವರಂಗ,ಇಸ್ಮಾಯಿಲ್ ಬಿಜಾಪುರ, ಸದಾನಂದ ನಾಯ್ಕ್-ಕುರ್ಪಾಡಿ.

ಗ್ರಾಮೀಣ ಕೋಗಿಲೆ ಸಂಗೀತ ಸ್ಪರ್ಧೆ:
ಗ್ರಾಮೋತ್ಸವ ವಿಶೇಷ ಆಕರ್ಷಣೆಯಾಗಿ ಹಳ್ಳಿಯಲ್ಲಿ ಹಾಡು ಹಕ್ಕಿ ಗ್ರಾಮೀಣ ಕೋಗಿಲೆ ಸ್ಪರ್ಧೆಯನ್ನು ಆ ದಿನ ಮಧ್ಯಾಹ್ನ 3 ಗಂಟೆಯಿಂದ ನಡೆಸಲಾಗುತ್ತಿದೆ. ಸ್ಪರ್ಧೆಯನ್ನು ಖ್ಯಾತ ಗಾಯಕಿ ಟಿವಿ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ಕ್ಷಿತಿ ರೈ ಧರ್ಮಸ್ಥಳ ಅವರು ಉದ್ಘಾಟಿಸಲಿದ್ದಾರೆ. ಜನವರಿ22 ರೊಳಗೆ ಹೆಸರು ನೋಂದಾಯಿಸಿದವರಿಗೆ ಆ ದಿನ ಮೂರು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಕರ್ಷಕ ನಗದು ಬಹುಮಾನ ಮತ್ತು ಜ್ಯೂನಿಯರ್ ವಿಭಾಗಕ್ಕೆ ವಿಶೇಷ ಟ್ರೋಫಿಯಿದೆ. ಸಂಘಟಕರು, ಆದಿಗ್ರಾಮೋತ್ಸವ ಸಮಿತಿ ಅಂಚೆ ಅಜೆಕಾರು ಇಲ್ಲಿಗೆ ಪತ್ರ ಬರೆಯ ಬಹುದು. ದೂರವಾಣಿ ಸಂಖ್ಯೆ 8710978493 ಅಥವಾ ನವೀನ್ ಟಿ.ಆರ್. ಮೂಡುಬಿದಿರೆ 9886109102 ಗಳ ಮೂಲಕವೂ ಹೆಸರು ನೋಂದಾಯಿಸ ಬಹುದು.

 

Exit mobile version