Kundapra.com ಕುಂದಾಪ್ರ ಡಾಟ್ ಕಾಂ

ಕಲಾಕ್ಷೇತ್ರ ಕುಂದಾಪುರದ ಇನಿದನಿ: ಗಾನಸುಧೆಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಾರ್ದಿನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತದ ಆಸ್ವಾದನೆಯಿಂದ ಎಲ್ಲಾ ದುಗುಡ ದೂರವಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅದರಲ್ಲಿ ಅಂತಹ ಶಕ್ತಿ ಅಡಗಿದೆ ಎಂದು ಎಂಆರ್‌ಜಿ ಗ್ರೂಪ್ ಮಾಲಕ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

ಅವರು ಕಲಾಕ್ಷೇತ್ರ ಕುಂದಾಪುರ ದಶಮ ಸಂಭ್ರಮ ಕಾರ್ಯಕ್ರಮದ ಸಂದರ್ಭ ಇಲ್ಲಿನ ಬೋರ್ಡ್ ಹೌಸ್ಕೂಲ್ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಇನಿದದನಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅದ್ಬುತ ಸಂಗೀತ ಪ್ರತಿಭೆಗಳನ್ನು ಒಳಗೊಂಡು ಆಯೋಜಿಸಲಾದ ಇನಿದನಿ ಕಾರ್ಯಕ್ರಮ, ಸುಂದರ ವೇದಿಕೆ ಹಾಗೂ ಸಾಕ್ಷಿಯಾದ ಇಲ್ಲಿನ ಪ್ರೇಕ್ಷಕರು ಎಲ್ಲವೂ ಖುಷಿ ನೀಡಿತು ಎಂದರು.

ಕೆನರಾ ಬ್ಯಾಂಕ್ ಚೀಫ್ ಮೆನೇಜರ್ ಎಂಪಿ ನಂದನ್, ಕೋರಲ್ ಎಡ್ಜ್ ಪಾಲುದಾರ ದಿನೇಶ್ ಕಾರಂತ, ಕೋಟ ಜನತಾ ಫಿಶ್ ಮಿಲ್ ಮಾಲಕ ಆನಂದ ಸಿ. ಕುಂದರ್, ಉಡುಪಿ ಲಿಗಾಡೋ ಸಂಸ್ಥೆಯ ಮಾಲಕ ಇಬ್ರಾಹಿಂ ಗೋವಾ, ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಪಂಜುರ್ಲಿ ರಾಜೇಂದ್ರ ಶೆಟ್ಟಿ, ಹುಂತ್ರಿಕೆ ಸುಧಾಕರ ಶೆಟ್ಟಿ ಮೊದಲಾದವರು ಅತಿಥಿಗಳಾಗಿದ್ದರು.

ಎಂಆರ್‌ಜಿ ಗ್ರೂಪ್ ಮಾಲಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ವಿಶಾಲವಾದ ಇನಿದನಿ ವೇದಿಕೆ, ಖ್ಯಾತ ಸಂಗೀತ ಕಲಾವಿದರುಗಳಿಂದ ಹಳೆ ಕನ್ನಡ ಚಿತ್ರಗೀತೆಗಳ ಗಾಯನ ನೆರೆದಿದ್ದು ಎಂಟು ಸಾವಿರಕ್ಕೂ ಅಧಿಕ ಕಲಾವಿದರುಗಳನ್ನು ರಂಜಿಸಿತು.

ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ ಕಾವೇರಿ ಸ್ವಾಗತಿಸಿದರು, ಪ್ರವೀಣ ಕಾರ್ಯಕ್ರಮ ನಿರ್ವಹಿಸಿದರು. ಕಲಾಕ್ಷೇತ್ರದ ಗಿರೀಶ್ ಜಿ.ಕೆ, ದಾಮೋದರ ಪೈ, ಕೆ.ಆರ್. ನಾಯ್ಕ್, ಗೋಪಾಲ ವಿ., ಶ್ರೀಧರ ಸುವರ್ಣ, ಪ್ರಕಾಶ್ ಅಂಚನ್, ರಾಮಚಂದ್ರ ಪಿ.ಎನ್, ಮುರಳೀಧರ ಕುಂದಾಪುರ, ಗಣೇಶ್ ಭಟ್ಟ ಗೋಪಾಡಿ, ಪ್ರಶಾಂತ ಸಾರಂಗ, ಸುರೇಶ್ ನಾಯಕ್, ಜಗದೀಶ ಭಂಡಾರಿ, ಸಾಯಿನಾಥ ಶೇಟ್, ಸಾತ್ವಿಕ್ ಮೊದಲಾದವರು ಉಪಸ್ಥಿತರಿದ್ದರು.

Exit mobile version