Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ವಿಶ್ವ ಯೋಗ ದಿನಾಚರಣೆ

ಕುಂದಾಪುರ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರದ ಪ್ರಥಮ ವಿಶ್ವಯೋಗ ದಿನಾಚರಣೆ ಸಮಿತಿ ಆಶ್ರಯದಲ್ಲಿ ಜೂನ್ ೨೧ ರಂದು ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ೬.೪೫ಕ್ಕೆ ಸುಮಾರು ೫೦೦ ರಷ್ಟು ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ, ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಯಾಮವನ್ನು ಮಾಡಲಾಯಿತು.

ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಮಾಲಕ ಡಾ|| ಬಿ.ವಿ. ಉಡುಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಕೆ.ಕೆ. ಕಾಂಚನ್ ಕಾರ್ಯಕ್ರಮ ನಿರ್ವಹಿಸಿ, ಯೋಗ ಬಂಧು ರಘವೀರ ನಗರ್‌ಕರ್ ಯೋಗದ ಮಹತ್ವ ತಿಳಿಸಿ ವಂದಿಸಿದರು. ಯೋಗ ಶಿಕ್ಷಕರಾದ ಅಣ್ಣಪ್ಪ ಕೋಟೇಶ್ವರ ಅವರು ಸರಳವಾಗಿ ಯೋಗಾಭ್ಯಾಸವನ್ನು ಮಾಡಿಸಿದರು. ಯೋಗ ಶಿಕ್ಷಕಿ ಶಶಿಕಲಾ ಅವರು ಪ್ರಾರ್ಥನೆ, ಧ್ಯಾನ ಸಂಕಲ್ಪ ಮತ್ತು ಶಾಂತಿಮಂತ್ರವನ್ನು ಕಲಿಸಿದರು. ಹಾಲ್‌ನಲ್ಲಿ ಸಂಖ್ಯೆ ಹೆಚ್ಚುತ್ತಾ ಹೋದ ಹಿನ್ನಲೆಯಲ್ಲಿ ೬೦ ಮಂದಿಗೆ ಕುಂದಾಪುರದ ಬಿ.ಆರ್.ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಶಿಕ್ಷಕ ಕೆ. ರಾಮದಾಸ ಶೆಣೈ ಅವರು ಯೋಗಭ್ಯಾಸ ಮಾಡಿಸಿದರು.

Exit mobile version