Kundapra.com ಕುಂದಾಪ್ರ ಡಾಟ್ ಕಾಂ

ಉತ್ತಮ ಕಾರ್ಯ ಮಾಡುವುದು ರಾಷ್ಟ್ರ ನಿರ್ಮಾಣ ಮಾಡಿದಂತೆ: ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಯೊಬ್ಬರಲ್ಲಿಯೂ ಅಗಾಧವಾದ ಚೈತನ್ಯವಿದೆ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡರೆ ಗುರಿ ತಲುಪಲು ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದ್ದ ಸ್ವಾಮಿ ವಿವೇಕಾನಂದರು ಸರ್ವರಿಗೂ, ಸರ್ವಕಾಲಕ್ಕೂ ಸ್ಫೂರ್ತಿಯ ಚೇತನ ಎಂದು ಎಳಜಿತ ರಾಮಕೃಷ್ಣ ಕುಠೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.

ಅವರು ವಸ್ರೆ- ಮೈಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಯಾವುದೇ ಕಾರ್ಯವನ್ನು ಶ್ರದ್ಧೆ, ಗುರಿ ಇಟ್ಟುಕೊಂಡು ಮಾಡಿದರೆ ಫಲ ಖಂಡವಾಗಿಯು ದೊರೆಯುತ್ತದೆ. ನಮ್ಮ ಶಕ್ತಿಯನ್ನು ಉತ್ತಮ ಉದ್ದೇಶಕ್ಕಾಗಿ ತೊಡಗಿಸಿದರೆ ಅದು ರಾಷ್ಟ್ರ ನಿರ್ಮಾಣ ಮಾಡಿದಂತೆಯೇ ಎಂದರು.

ಶಾಲಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಗೆಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ವಸ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯಿನಿ ಮಹಾದೇವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ಭಾಗೀರಥಿ ಎಚ್., ನಿತ್ಯಾನಂದ, ಶಶಿಕಲಾ, ಪ್ರಮೋದಾ ಉಪಸ್ಥಿತರಿದ್ದರು.

Exit mobile version