Kundapra.com ಕುಂದಾಪ್ರ ಡಾಟ್ ಕಾಂ

ಅಂತರ್ ಕಾಲೇಜು ಪ್ರತಿಭಾ ಪ್ರದರ್ಶನ ಸ್ವರ್ಧೆ ‘ಚಿಲುಮೆ -2020’ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳು ಕೇವಲ ಅಕ್ಷರಸ್ಥರಾದರೆ ಸಾಲದು. ಸಮಾಜವನ್ನು ಮಾನವೀಯ ಅಂತಕರಣದಿಂದ ನೋಡುವ ವಿದ್ಯಾವಂತರಾಗಬೇಕಿದೆ. ವಿದ್ಯಾರ್ಥಿಗಳ ನಡವಳಿಕೆ, ಹಾವಭಾವ, ವೇಷಭೂಷಣಗಳು ಅವರಲ್ಲಿನ ಶಿಸ್ತು, ಹಾಗೂ ಪ್ರಜ್ಞೆಯನ್ನು ಪ್ರತಿಫಲಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿ ಗೌಡ ಹೇಳಿದರು.

ಅವರು ಶನಿವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಪ್ರತಿಭಾ ಪ್ರದರ್ಶನ ಸ್ವರ್ಧೆ ಚಿಲುಮೆ – ೨೦೨೦ ಉದ್ಘಾಟಿಸಿ ಮಾತನಾಡಿ ಬದುಕಿನಲ್ಲಿ ಸಮಯದ ಮಹತ್ವ ದೊಡ್ಡದು. ವಿದ್ಯಾರ್ಥಿ ಜೀವನವೂ ಮಹತ್ವದ್ದು. ಇವೆರಡನ್ನೂ ವ್ಯಥ್ಯವಾಗಿ ಕಳೆಯದೇ ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಸಾಧಕರಾಗಲು ಸಾಧ್ಯವಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ., ಬೈಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾಗೀರಥಿ ಎಸ್., ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುತ್ತಯ್ಯ ಪೂಜಾರಿ, ಉದ್ಯಮಿಗಳಾದ ಜಯಾನಂದ ಹೋಬಳಿದಾರ್, ಶರತ್ ಕುಮಾರ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವರಾಜ ಪೂಜಾರಿ, ಬಿಜೂರು ವಜ್ರದುಂಬಿ ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ಬೈಟು ಅತಿಥಿಗಳಾಗಿದ್ದರು.

ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲತಾ ಪೂಜಾರಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ನವೀನ್ ಕಾರ್ಯಕ್ರಮ ನಿರೂಪಿಸಿದರು.

Exit mobile version