Site icon Kundapra.com ಕುಂದಾಪ್ರ ಡಾಟ್ ಕಾಂ

ಜೆಇಇ ಮೈನ್ಸ್: ಸಿದ್ಧಾರ್ಥ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಟ್ಕಳ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಜೆಇಇ) ಮೈನ್ಸ್ ಇದರ 2020ನೇ ಸಾಲಿನ ಪ್ರಥಮ ಹಂತದ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ 30ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿ, 10ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶೇಕಡಾವಾರು 90ಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಅಭಿಷೇಕ ಎನ್.ಎನ್ 98%, ಅಭಿಷೇಕ್ ವಿ. ನಾಯ್ಕ್ 98%, ಜಯದೀಪ ಪ್ರಭು 95%, ಆದರ್ಶ ಎಸ್. ನಾಯ್ಕ್ 94%, ಪ್ರಸನ್ನ ನಾಯ್ಕ್ 94%, ಅಶ್ವಿನಿ 93%, ಪ್ರಶಾಂತ ನಾಯ್ಕ್ 94%, ಸಾಗರ್ ಎಸ್. ನಾಯ್ಕ್ 89%, ಪುಂಡಲೀಕ ನಾಯಕ್ 86%, ದರ್ಶನ್ 82% ಫಲಿತಾಂಶ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕ್ಯಾ. ಕೆ.ಆರ್. ನಾಯ್ಕ್ ಹಾಗೂ ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

 

Exit mobile version