Site icon Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಮಿಡ್‌ಟೌನ್ ಅಧ್ಯಕ್ಷರಾಗಿ ಮಹೇಶ್ ಬೆಟ್ಟಿನ್ ಆಯ್ಕೆ

ಕುಂದಾಪುರ: ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರ ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮಹೇಶ್ ಬೆಟ್ಟಿನ್ ಆಯ್ಕೆಯಾಗಿದ್ದಾರೆ.

ಕೋಟೇಶ್ವರದಲ್ಲಿ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್‌ನ ಉದ್ಯಮವನ್ನು ನಡೆಸುತ್ತಿರುವ ಇವರು ಕುಂದಾಪುರದ ರೋಯಲ್ ಕ್ಲಬ್‌ನ ಅಧ್ಯಕ್ಷರಾಗಿ ಹಾಗೂ  ಜೇಸಿಐ ಕುಂದಾಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪದಾಧಿಕಾರಿಗಳಾಗಿ ರವೀಶ್‌ಚಂದ್ರ ಶೆಟ್ಟಿ(ಕಾರ್ಯದರ್ಶಿ), ರಘುರಾಮ ಶೆಟ್ಟಿ ಹೆಚ್. (ಖಜಾಂಚಿ), ಶಿವರಾಮ್ ಶೆಟ್ಟಿ (ಮೆಂಬರ್ ಶಿಫ್ ಡೆವಲಪ್‌ಮೆಂಟ್ ಸಮಿತಿ ಸಂಚಾಲಕ), ರವಿಶಂಕರ್ (ಕ್ಲಬ್ ಸರ್ವಿಸ್), ನಿತ್ಯಾನಂದ ಶೆಟ್ಟಿ (ಒಕೇಶನಲ್ ಸರ್ವಿಸ್), ಮಧುಕರ್ ಹೆಗ್ಡೆ (ಕಮ್ಯೂನಿಟ್ ಸರ್ವಿಸ್), ವೈ.ಸೀತಾರಾಂ ಶೆಟ್ಟಿ (ಇಂಟರ್ ನ್ಯಾಷನಲ್ ಸರ್ವಿಸ್), ಗೌತಮ್ ಹೆಗ್ಡೆ (ರೋಟರಿ ಫೌಂಡೇಶನ್), ಡಾ. ಪ್ರಸಾದ್ ಶೆಟ್ಟಿ (ಪೋಲಿಯೋ ಪ್ಲಸ್), ಶಂಕರ್ ಶೆಟ್ಟಿ (ಲಿಟರಸಿ ಚಯರ್‌ಮೆನ್), ವೈ.ಜಯಪ್ರಕಾಶ್ ಶೆಟ್ಟಿ (ಸ್ಫೋರ್ಟ್ಸ್ ಹಾಗೂ ಸಾಂಸ್ಕೃತಿಕ), ಸುಧಾಕರ ಶೆಟ್ಟಿ (ಸಿಂಧೂರ ಪತ್ರಿಕೆ ಸಂಪಾದಕ), ರಾಮ ನಾಯ್ಕ್ (ಫೆಲೋಶಿಪ್ ಕಮಿಟಿ ಚಯರ್‌ಮೆನ್) ಆಯ್ಕೆಯಾದರು.

Exit mobile version