ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಿಂದ ಆನಗಳ್ಳಿ ದತ್ತಾಶ್ರಮದವರೆಗೆ ಹಮ್ಮಿಕೊಂಡ ಪುರ ಮೆರವಣಿಗೆಗೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋವರ‍್ಸ್ ಸ್ಕೌಟ್ ಲೀಡರ್ ಹಾಗೂ ರ‍್ಯಾಲಿಯ ನಾಯಕ ಪ್ರವೀಣ್ ಮೊಗವೀರ ಗಂಗೊಳ್ಳಿ ಚಾಲನೆ ನೀಡಿದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ, ಕುಂದಾಪುರದ ಅಧ್ಯಕ್ಷರಾದ ಗುಣರತ್ನ, ಕಾರ್ಯದರ್ಶಿ ರೇಖಾ, ಖಜಾಂಚಿ ಶ್ರೀ ವಿರೇಂದ್ರ ಹಾಗೂ ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

