Kundapra.com ಕುಂದಾಪ್ರ ಡಾಟ್ ಕಾಂ

ರೋಟರಿಯ ಜನಸೇವೆ ತೃಪ್ತಿ ನೀಡಿದೆ: ಅಬ್ದುಲ್ ಬಶೀರ್ ಕೋಟ

ಕುಂದಾಪುರ: ಪ್ರತಿ ಮಗುವಿನ ಉಜ್ವಲ ಭವಿಷ್ಯದ ದೃಷ್ಠಿಯಲ್ಲಿ ವಿದ್ಯೆಯು ಬಹಳ ಮುಖ್ಯವಾಗಿದೆ ಆದುದರಿಂದ ರೋಟರಿ ಕ್ಲಬ್ ಮಿಡ್ ಟೌನ್ ವಿದ್ಯೆಯ ಹಸಿವನ್ನು ನೀಗಿಸುವ ಸಲುವಾಗಿ ಆಧುನಿಕ ಜಗತ್ತಿಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಿದೆ ಎಂದು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಅಬ್ದುಲ್ ಬಶೀರ್ ಕೋಟ ಹೇಳಿದರು.

ಅವರು ಜೂ.24ರಂದು ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ ಶಾಲೆಗೆ ಕೊಡ ಮಾಡಲ್ಪಟ್ಟ ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.

ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾಗಿ ಜನ ಸೇವೆ ಮಾಡಲು ಅವಕಾಶ ಒದಗಿದ್ದು, ಒಂದು ವರ್ಷದ ಅವಧಿಯಲ್ಲಿ ಅಗತ್ಯತೆಯಿರುವವರ ಹೊಟ್ಟೆಯ ಹಸಿವಿನಿಂದ ಹಿಡಿದು ವಿದ್ಯೆಯ ಹಸಿವನ್ನು ಇಂಗಿಸುವ ಅವಕಾಶವನ್ನು ಪೂರೈಸಿರುವ ಸೇವಾ ತೃಪ್ತಿ ತನಗಿದೆ ಎಂದು ಅಬ್ದುಲ್ ಬಶೀರ್ ಹೇಳಿದರು.

ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ ಶಾಲೆಗೆ ಸೆಲ್ಕೋ ಸೋಲಾರ್ ಲೈಟ್ ಕಂಪನಿಯ ಇ-ಶಾಲೆ ಕಲಿಕೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸಿದೆ.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಿಡ್‌ಟೌನ್ ಕಾರ್ಯದರ್ಶಿ ಕಾವ್ರಾಡಿ ಸಂಪತ್ ಕುಮಾರ್ ಶೆಟ್ಟಿ, ೨೦೧೫-೧೬ನೇ ಸಾಲಿನ ಅಧ್ಯಕ್ಷ ಮಹೇಶ್ ಬೆಟ್ಟಿನ್, ಸೆಲ್ಕೋ ಸೋಲಾರ್ ಕಂಪೆನಿಯ ಸೀನಿಯರ್ ಮೆನೇಜರ್ ಶೇಖರ್ ಶೆಟ್ಟಿ,  ಕುಂದಾಪುರದ ಅಂಜುಮಾನ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಉದ್ಯಮಿ ಎ.ಕೆ. ಸಾಹೇಬ್, ಕುಂದಾಪುರ ಮಸೀದಿಯ ಧರ್ಮಗುರು ಮೌಲಾನಾ ಅಬ್ದುರ್ ರಹೀಮ್, ಕುಂದಾಪುರ ಪುರಸಭೆ ಸದಸ್ಯೆ ಪುಷ್ಪಾ ಶೇಟ್, ರೋಟರಿ ಸದಸ್ಯರಾದ ಗೌತಮ್ ಹೆಗ್ಡೆ, ಸದಾನಂದ ಶೆಟ್ಟಿ, ಸೆಲ್ಕೋ ಸೋಲಾರ್ ಕಂಪೆನಿಯ ಬ್ರಾಂಚ್ ಮೆನೇಜರ್ ಮಂಜುನಾಥ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯೋಪಧ್ಯಾಯಿನಿ ಡಿ.ಕೆ.ಮಾಲತಿ ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಭಾಗಿರಥಿ ಕಾರ್ಯಕ್ರಮ ನಿರ್ವಹಿಸಿ, ಶಿಕ್ಷಕ ಸರ್ವೋತ್ತಮ ಶೆಟ್ಟಿ ವಂದಿಸಿದರು.

Exit mobile version