Kundapra.com ಕುಂದಾಪ್ರ ಡಾಟ್ ಕಾಂ

ರಂಗ ಸುರಭಿ – 2020: ಫೆ.8 ರಿಂದ 14ರ ತನಕ ಶಿಶಿರ ನಾಟಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು ಮತ್ತು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಏಳು ದಿನಗಳ ಕಾರ್ಯಕ್ರಮ ರಂಗ ಸುರಭಿ – 2020 ’ಶಿಶಿರ ನಾಟಕೋತ್ಸವ’ ಆಯೋಜಿಸಿದೆ. ಸುರಭಿ ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಪ್ರತಿವರ್ಷದಂತೆ ಫೆಬ್ರವರಿ 8 ರಿಂದ ಫೆಬ್ರವರಿ 14ರ ತನಕ ಪ್ರತಿದಿನ ಸಂಜೆ 6:30ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.

ಫೆಬ್ರವರಿ 08 ಶನಿವಾರ ರಂಗಾಯಣ ಮೈಸೂರು ಅಭಿನಯದ, ರಮಾನಾಥ ಎಸ್. ರಚಿಸಿ, ಚಂದ್ರಹಾಸ್ ಕೇರಳ ನಿರ್ದೇಶಿಸಿದ ನಾಟಕ ’ಆರ‍್ಕೇಡಿಯಾದಲ್ಲಿ ಪಕ್’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 09 ರವಿವಾರ ರಂಗಾಯಣ ಮೈಸೂರು ಅಭಿನಯದ, ಗಿರೀಶ್ ಕಾರ್ನಾಡ್ ರಚನೆ, ಚಿದಂಬರ್ ರಾವ್ ಜಂಬೆ ನಿರ್ದೇಶನದ ನಾಟಕ ’ಬೆಂದಕಾಳು ಆನ್ ಟೋಸ್ಟ್’ ಪ್ರದರ್ಶನಗೊಳ್ಳಲಿದ್ದು, ಫೆಬ್ರವರಿ 10 ಸೋಮವಾರ ರಂಗಾಯಣ ಮೈಸೂರು ಅಭಿನಯದ, ಶರವಣ್ ಕುಮಾರ್ ರಚಿಸಿ, ನಿರ್ದೇಶಿಸಿದ ನಾಟಕ ’ರೆಕ್ಸ್ ಆವರ್ಸ್’ ಡೈನೋ ಏಕಾಂಗಿ ಪಯಣ ಪ್ರದರ್ಶನ ಕಾಣಲಿದೆ. ಫೆಬ್ರವರಿ 11 ಮಂಗಳವಾರ ಸ್ವಂದನ ರಿ. ಸಾಗರ ಅಭಿನಯದ, ಡಾ| ಎಂ.ಜಿ ಹೆಗ್ಡೆ ಕನ್ನಡಕ್ಕೆ ಅನುವಾದಿಸಿ, ಎಸ್.ಕೆ. ದ್ವಾರಕನಾಥ್ ವಿನ್ಯಾಸ ಹಾಗೂ ಡಾ. ಶ್ರೀಪಾದ್ ಭಟ್ ನಿರ್ದೇಶನದಲ್ಲಿ ಮುಡಿಬಂದ ನಾಟಕ ’ಯುದ್ಧ ಬಂತು ಮನೆಯವರೆಗೆ’ (ನಾಟಕ ತ್ರಿವಳಿ) ಪ್ರದರ್ಶನಗೊಳ್ಳಿದೆ. ಫೆಬ್ರವರಿ 12ರ ಬುಧವಾರ ಆಯನ ಮಂಗಳೂರು ಅಭಿನಯದ, ಅಥೋಲ್ ಪ್ಯುಗಾಡ್ ರಚನೆಯ, ಎಸ್. ಆರ್. ರಮೇಶ್ ಅನುವಾದಿಸಿ, ಕೆ. ಪಿ. ಲಕ್ಷ್ಮಣ್ ನಿರ್ದೇಶಿಸಿದ ನಾಟಕ ’ದ್ವೀಪ’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 13ರ ಗುರುವಾರ ಮಂದಾರ ರಿ. ಬೈಕಾಡಿ ಬ್ರಹ್ಮಾವರ ಅಭಿನಯದ, ಡಾ. ಜಿ.ಎಸ್ ಭಟ್ಟ ಸಾಗರ ರಚನೆಯ, ರೋಹಿತ್ ಎಸ್. ಬೈಕಾಡಿ ವಿನ್ಯಾಸ ಹಾಗೂ ನಿರ್ದೇಶನದ ನಾಟಕ ’ಕೊಳ್ಳಿ’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 14ರ ಶುಕ್ರವಾರ ಪಾದುವ ರಂಗ ಅಧ್ಯಯನ ಕೇಂದ್ರ ಅಭಿನಯದ, ಎಂ.ಪಿ ರಾಜೇಶ್ ಅವರ, ಅರುಣ್‌ಲಾಲ್ ವಿನ್ಯಾಸ ಹಾಗೂ ನಿರ್ದೇಶನ ಮಾಡಿದ ನಾಟಕ ’ಕೆಂಡೋನಿಯನ್ಸ್’ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 09ರ ರವಿವಾರ ಬೆಳಿಗ್ಗೆ 9:30ಕ್ಕೆ ಪಡುವರಿ ಮಾವಿನಕುಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಭಿ ಕಲಾಗ್ರಾಮದಲ್ಲಿ ’ರಂಗಭೂಮಿಯಲ್ಲಿ ಸಂಘಟನೆಯ ಪಾತ್ರ’ ಎಂಬ ವಿಷಯದ ಕುರಿತು ರಂಗ ಸಂವಾದ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರತಿದಿನ ಸುರಭಿ ಮಹಿಳಾ ಚಂಡೆ ತಂಡದಿಂದ ಚಂಡೆವಾದನ, ಸಭಾ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಗೆ ಗೌರವಾರ್ಪಣೆ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ನಿರ್ದೇಶಕ ಸುಧಾಕರ ಪಿ. ಬೈಂದೂರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version