ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುಜರಾತಿನ ವಡೋದರದಲ್ಲಿ ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ ನಾಗರಾಜ ಖಾರ್ವಿ ಇವರು 200ಮೀ ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 100ಮೀ ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 50ಮೀ. ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ನಾಗರಾಜ ಖಾರ್ವಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚುಗೋಡು ಮತ್ತು ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆ ವಿದ್ಯಾರ್ಥಿ. ಇವರಿಗೆ ರೇಷ್ಮೆ ಇಲಾಖೆಯ ನಿರೀಕ್ಷಕ ಬಿ. ಕೆ. ನಾಯ್ಕ್, ಈಜು ತರಬೇತುದಾರ ಶಿವಾನಂದ ಗಟ್ಟಿ, ಲೋಕರಾಜ್ ವಿಟ್ಲ ಈಜು ತರಬೇತಿ ನೀಡಿರುತ್ತಾರೆ.