Kundapra.com ಕುಂದಾಪ್ರ ಡಾಟ್ ಕಾಂ

ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಐತಿಹಾಸಿಕ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಶಿವನಾಮ ಸ್ಮರಣೆ, ಭಜನಾ ಕಾರ್ಯಕ್ರಮಗಳು ಜರುಗಿದವು.

ಐತಿಹ್ಯ:
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. ೨೦ ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ.

ಈ ಮೊದಲು ಶಿವರಾತ್ರಿಯಂದು ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗುಹೇಶ್ವರನ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು:
ಮಾರ್ಚ್ ತಿಂಗಳ 4ರಂದು ದೇವಳಲ್ಲಿ ವಿವಿಧ ಹೋಮ ಹವನ, ಮಾರ್ಚ್5ರಂದು ಶ್ರೀ ಗುಹೇಶ್ವರ ದೇವರ ವರ್ಧತ್ಯುತ್ಸವ ಮತ್ತು ಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಮಾರ್ಚ್6ರಂದು ನಾಗದೇವರು ಹಾಗೂ ಭ್ರದ್ರಕಾಳಿ ಅಮ್ಮನವರ ಪುನರ್ ಪ್ರತಿಷ್ಠಾ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದನ್ನೂ ಓದಿ:
► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಶಿವಭಕ್ತರು – https://kundapraa.com/?p=35517

► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=35553

► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35569

 

Exit mobile version