Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಶೇಷ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ನಡೆಯಿತು. ಸಹಸ್ರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರು. ಶಿವರಾತ್ರಿ ಉಪವಾಸವನ್ನು ಕೈಗೊಂಡು ಕೃತಾರ್ಥರಾದರು.

ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶ ಭಕ್ತರದ್ದಾಗಿತ್ತು. ಐತಿಹಾಸಿಕ ಹಾಗೂ ಐತಿಹ್ಯವಿರುವ ಶಿವಾಲಯಗಳಿಗೆ ಭಕ್ತ ದಂಡು ಹರಿದು ಬಂದಿತ್ತು.

ಪಂಚ ಶಂಕರನಾರಾಯಣ ಕ್ಷೇತ್ರಗಳಾದ ಬೆಳ್ವೆ ಶ್ರೀ ಶಂಕರನಾರಾಯಣ, ಆವರ್ಸೆ ಶ್ರೀ ಶಂಕರನಾರಾಯಣ, ಮಾಂಡವಿ ಶ್ರೀ ಶಂಕರನಾರಾಯಣ, ಶ್ರೀ ಕ್ರೋಢ ಶಂಕರನಾರಾಯಣ, ಶ್ರೀ ಹೊಳೆ ಶಂಕರನಾರಾಯಣ ದೇವಾಲಯಗಳು, ಆಜ್ರಿ ಶ್ರೀ ತ್ರೈಂಬಕೇಶ್ವರ ದೇವಾಲಯ, ಬೈಂದೂರು ಐತಿಹಾಸಿಕ ಶ್ರೀ ಸೇನೇಶ್ವರ ದೇವಾಲಯ, ಪಡುವರಿಯ ಶ್ರೀ ಸೋಮೇಶ್ವರ ದೇವಾಲಯ, ಕಿರಿಮಂಜೇಶ್ವರದ ಶ್ರೀ ಅಗಸ್ತೇಶ್ವರ ದೇವಾಲಯ, ಹೆರಂಜಾಲಿನ ಶ್ರೀ ಗುಡೆಮಹಾಲಿಂಗೇಶ್ವರ ದೇವಾಲಯ, ಗುಜ್ಜಾಡಿಯ ಗುಹೇಶ್ವರ ದೇವಾಲಯ, ಮರವಂತೆ ಶ್ರೀ ಗಂಗಾಧರೇಶ್ವರ ದೇವಾಲಯ, ಗಂಗೊಳ್ಳಿಯ ಶ್ರೀ ವೀರಶೈವ ದೇವಸ್ಥಾನ, ಶ್ರೀ ಇಂದುಧರ ದೇವಾಲಯ, ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಾಲಯ, ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಮೂಡುಗಲ್ಲು ಶ್ರೀ ಕೇಶವನಾಥ ದೇವಾಲಯ, ಕುಂದಾಪುರದ ಶ್ರೀ ಕುಂದೇಶ್ವರ ದೇವಾಲಯ, ಕೊಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯ, ಹಿಲ್ಕೋಡು ಶ್ರೀ ಮಹಾಲಿಂಗೇಶ್ವರ ದೇವಾಲಯ, ಶ್ರೀ ಕುಂಭಾಶಿ ಶ್ರೀ ಹರಿಹರ ಕ್ಷೇತ್ರ, ಬಸ್ರೂರು ಮಹಾಲಿಂಗೇಶ್ವರ ದೇವಾಲಯ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಾಲಯ, ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ರಾತ್ರಿ ಶಿವರಾತ್ರಿಯ ಅಂಗವಾಗಿ ಜಾಗರಣೆ ನಡೆಯಲಿದ್ದು, ಶಿವನಾಮ ಸ್ಮರಣೆ, ಭಜನೆ ನಡೆಯತ್ತದೆ.

ಇದನ್ನೂ ಓದಿ:
► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಶಿವಭಕ್ತರು – https://kundapraa.com/?p=35517

► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35543

► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=35553

► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35569

Exit mobile version