Site icon Kundapra.com ಕುಂದಾಪ್ರ ಡಾಟ್ ಕಾಂ

ಬರ್ನಾರ್ಡ್ ಕೊಸ್ತಾರಿಗೆ ಕ್ರಿಸ್ತಿ ಕಲಾಂಗಣ್ ಸಂಸ್ಥೆಯಿಂದ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖ್ಯಾತ ಕೊಂಕಣಿ-ಕನ್ನಡ ಸಾಹಿತಿ, ನಾಟಕ ರಚನೆಗಾರ, ಪತ್ರಕರ್ತ ಕುಂದಾಪುರದ ಬರ್ನಾರ್ಡ್ ಜೆ. ಕೊಸ್ತಾರವರಿಗೆ ಬೈಂದೂರು ಚರ್ಚಿನ ಕಲಾವಿದರ ಸಂಸ್ಥೆಯಾದ ’ಕ್ರಿಸ್ತಿ ಕಲಾಂಗಣ್” ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊ, ಬೆಳ್ವೆ ಚರ್ಚಿನ ಧರ್ಮಗುರುಗಳಾದ ರೆ.ಫಾ. ಡೆನ್ನಿಸ್, ಚರ್ಚ್ ಮಂಡಳಿಯ ಉಪಾಧ್ಯಕ್ಷರಾದ ಸ್ಟ್ಯಾನಿ ಡಾಯಸ್, ಕ್ರಿಸ್ತಿ ಕಲಾಂಗಣ್ ಸಂಸ್ಥೆಯ ಸಂಯೋಜಕ ಇಗ್ನೇಶಿಯಸ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ನಂತರ್ ಬರ್ನಾರ್ಡ್ ಜೆ. ಕೊಸ್ತಾರವರು ರಚಿಸಿದ “ಮಹಾ ಪಿಟ್ಟಾಷಿ” ಕೊಂಕಣಿ ಹಾಸ್ಯ ನಾಟಕವನ್ನು ಕ್ರಿಸ್ತಿ ಕಲಾಂಗಣ್ ಸದಸ್ಯರು ಪ್ರದರ್ಶಿಸಿದರು.

 

Exit mobile version