Kundapra.com ಕುಂದಾಪ್ರ ಡಾಟ್ ಕಾಂ

ಸಂಪರ್ಕ್ ಭಾಷಾ ಮೇ ಹಿಂದಿ ಕಾ ಮಹತ್ವ್ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾಷೆ ಮನುಷ್ಯನ ವಿಚಾರ ವಿನಿಮಯ ಮತ್ತು ಭಾವನೆಯನ್ನು ವ್ಯಕ್ತಪಡಿಸುವ ಸಾಧನ. ಸಂಪರ್ಕ ಭಾಷೆಯು ಜನ ಭಾಷೆಯಾಗಿದೆ. ಭಾಷೆಯು ಸಾಹಿತ್ಯ ರೂಪ ಮತ್ತು ರಾಜನೀತಿಕ ರೂಪವನ್ನು ಕಲ್ಪಿಸುತ್ತದೆ. ಭಾರತ ದೇಶದಲ್ಲಿ ವಿಭಿನ್ನ ವರ್ಗದವರು ವಿಭಿನ್ನ ಭಾಷೆಯಲ್ಲಿ ಸಂಪರ್ಕ ಭಾಷೆಯ ರೂಪದಲ್ಲಿ ಮಾತನಾಡುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಸಂಪರ್ಕ ಭಾಷೆಯ ಉದ್ದೇಶ ಎಂದು ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಮಾಧವಿ ಎಸ್. ಭಂಡಾರಿ ಹೇಳಿದರು.

ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ಸಂಪರ್ಕ್ ಭಾಷಾ ಮೇ ಹಿಂದಿ ಕಾ ಮಹತ್ವ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದೀಪಾ ಸ್ವಾಗತಿಸಿದರು.

ವಿದ್ಯಾರ್ಥಿಗಳಾದ ತನ್‌ಸಿಲಾ ಪ್ರಾರ್ಥಿಸಿ, ರಾನಿಯಾ ಸುಲ್ತಾನ ಅತಿಥಿಗಳನ್ನು ಪರಿಚಯಿಸಿ, ಸೋನಾಲ್ ಪ್ರತಿಷ್ಠಾ ವಂದಿಸಿ, ಹೆಗ್ಡೆ ಸುಭೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Exit mobile version