ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ:ಸೈಂಟ್‌ಅಲೋಷಿಯಸ್ ಕಾಲೇಜು ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ’ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಸತತವಾಗಿ ಮೂರನೇ ಬಾರಿ ಆಳ್ವಾಸ್ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ವರದಿಗಾರಿಕೆಯಲ್ಲಿ ದುರ್ಗಾಪ್ರಸನ್ನಾ ಪ್ರಥಮ, ಆರ್.ಜೆ ಸ್ಪರ್ಧೆಯಲ್ಲಿ ದಿಶಾ ಶೆಟ್ಟಿ ದ್ವಿತೀಯ, ಪಿ ಟು ಸಿಯಲ್ಲಿ ಚೈತ್ರಾ ಪ್ರಥಮ, ನೃತ್ಯದಲ್ಲಿ ವೀಕ್ಷಿತಾ ಶೆಟ್ಟಿ ಮತ್ತು ತಂಡ ಪ್ರಥಮ, ಫೊಟೋಗ್ರಾಫಿಯಲ್ಲಿ ಶರದ್‌ಆಚಾರ್ ದ್ವಿತೀಯ, ಮೇಕಿಂಗ್ ಎ ಪ್ರೊಡಕ್ಟ್ ಶ್ರೀಲಕ್ಷ್ಮಿ ಘಾಟೆ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಪಡೆದುಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ‍್ಯ ಡಾ. ಕುರಿಯನ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಹಾಗೂ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ ಎಸ್, ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಬಂಟ್ವಾಳ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.