Site icon Kundapra.com ಕುಂದಾಪ್ರ ಡಾಟ್ ಕಾಂ

ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಬ್ರಹ್ಮಾವರ ರುಡ್‌ಸೆಟ್ ಇವರ ಆಶ್ರಯದಲ್ಲಿ ಗಂಗೊಳ್ಳಿ ಇಗರ್ಜಿಯ ವ್ಯಾಪ್ತಿಯ ಮಹಿಳೆಯರಿಗೆ ಗಂಗೊಳ್ಳಿ ಇಗರ್ಜಿಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ 10 ದಿನದ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರವನ್ನು ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಧರ್ಮಗುರು ರೆ.ಫಾ. ಅಲ್ಬರ್ಟ್ ಕ್ರಾಸ್ತಾ ಬುಧವಾರ ಉದ್ಘಾಟಿಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪಾಪಾ ನಾಯಕ್, ಉಪನ್ಯಾಸಕ ಕರುಣಾಕರ ಜೈನ್, ತರಬೇತಿ ಶಿಕ್ಷಕಿ ಅಶ್ವಿನಿ ದೇಸಾಯಿ, ಸಂಪದ ಸಂಸ್ಥೆಯ ಸಂಯೋಜಕಿ ಜುಡಿತ್ ಡಿಸೋಜ, ಸುಗಮ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಡೆಸಾ, ಅಮೃತಾ ಮಹಾ ಸಂಘದ ಅಧ್ಯಕ್ಷೆ ಆಶಾ ರೆಬೆರೊ, ಕಾರ್ಯದರ್ಶಿ ಪ್ಲೊಸಿ ಬ್ರಗಾಂಜ, ಸ್ತ್ರೀ ಸಚೇತಕಿ ಜ್ಯೋತಿ ಎ.ಸಿ., 18 ಆಯೋಗದ ಸಂಯೋಜಕಿ ಪ್ರೀತಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷೆ ಆಶಾ ರೆಬೆರೊ ಸ್ವಾಗತಿಸಿದರು. ಪ್ರೀತಿ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ಲೊಸಿ ಬ್ರಗಾಂಜ ವಂದಿಸಿದರು.

Exit mobile version