Site icon Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ 75ನೇ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಆಹ್ವಾನಿತ ಶಾಲಾ ಬಾಲಕ-ಬಾಲಕಿಯರ ತಂಡಗಳ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭ ಗಂಗೊಳ್ಳಿ ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿದ್ದ ಬಸ್ರೂರು ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜರ್ ಮಹಾಬಲ ಕೆ. ಶುಭ ಹಾರೈಸಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ನಿವೃತ್ತ ಶಿಕ್ಷಕ ಮುಡೂರ ಅಂಬಾಗಿಲು, ಗುಜ್ಜಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ ಶ್ರೀಧರ ಮೇಸ್ತ, ರಾಧಿಕಾ ಮೇಸ್ತ, ದೀಪಾ ಮೇಸ್ತ, ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ., ಜಗದೀಶ ನಾಯಕವಾಡಿ, ದೇವಸ್ಥಾನದ ಉಪಾಧ್ಯಕ್ಷ ಸುರೇಶ ಜಿ., ಅರುಣ್ ಕುಮಾರ್, ಗುರುರಾಜ್ ಜಿ., ಮಂಜುನಾಥ ಜಿ.ಟಿ., ನಾಗಿಣಿ, ಸುಶೀಲ, ಗಂಗಾ, ಸುಮಿತ್ರಾ, ಜಯಂತಿ, ವಿಘ್ನೇಶ ಜಿ.ಕೆ., ಗೌರಿ, ನರಸಿಂಹ, ಶಿವ ಜಿ.ಟಿ., ಮಮತಾ, ತೀರ್ಪುಗಾರರಾದ ಜಗದೀಶ ಎಂ.ಜಿ., ಸಂದೀಪ ಎಂ.ಜಿ. ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ಅಧ್ಯಕ್ಷ ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ವಂದಿಸಿದರು.

ಸ್ಪರ್ಧೆಯ ಫಲಿತಾಂಶ :
ಗಂಗೊಳ್ಳಿ ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆ (ಪ್ರಥಮ), ರಾಮ್ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ತಂಡ (ದ್ವಿತೀಯ), ಭಜನಾ ತಂಡ ಗುಜ್ಜಾಡಿ (ತೃತೀಯ)

Exit mobile version