Site icon Kundapra.com ಕುಂದಾಪ್ರ ಡಾಟ್ ಕಾಂ

ರಿಚರ್ಡ ಅಲ್ಮೇಡಾ ಮೆಮೋರಿಯಲ್ ಕಾಲೇಜ್: ಕ್ಯಾಂಪಸ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ರಿಚರ್ಡ ಅಲ್ಮೇಡಾ ಮೆಮೋರಿಯಲ್ ಕಾಲೇಜ್ ನಾವುಂದ ಇದರ ಉದ್ಯೋಗ ಮಾರ್ಗದರ್ಶನ ಘಟಕದ ಆಶ್ರಯದಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಿಗೆ ನಂದಿ ಟೋಯೊಟಾ ಕಂಪೆನಿ ಬೆಂಗಳೂರು ಅವರು ಕ್ಯಾಂಪಸ್ ಆಯ್ಕೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

ಈ ಕಾರ‍್ಯಕ್ರಮದ ಉದ್ಘಾಟನೆಯನ್ನು ಮಾಡಿದ ಸಂಸ್ಥೆಯ ಪ್ರಧಾನ ಸಂಚಾಲಕರಾದ ಸಿಲ್ವೆಸ್ಟರ್ ಡಿ’ಅಲ್ಮೇಡಾರವರು, ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಪಡೆಯಲು ಹಾರೈಸಿದರು. ಪ್ರಾಂಶುಪಾಲರಾದ ಪ್ರೋ. ಜಿ.ಎಸ್.ಹೆಗಡೆ ಪ್ರಾಸ್ತಾವಿಕವಾಗಿ ಈ ಕಾರ‍್ಯಕ್ರಮದ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. ನಂದಿ ಟೋಯೊಟಾ ಕಂಪೆನಿಯ ಮನವ ಸಂಪನ್ಮೂಲ ವಿಭಾಗದ ಮುಖ್ಯಸ್ಠರಾದ ಅಖಿನ ಸೈಮನ್ ಹಾಗೂ ಶಕುಲ್ ರವರು ಆಯ್ಕೆಯ ವಿವಿಧ ಹಂತಗಳನ್ನು ನಡೆಸಿಕೊಟ್ಟರು. ಕಾಲೇಜಿನ ಕೆಲವು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ. ಉದ್ಯೋಗ ಮಾರ್ಗದರ್ಶನ ಘಟಕದ ಅಧ್ಯಾಪಕ ಸಲಹೆಗಾರರಾದ ರಾಮದಾಸ್ ಪ್ರಭು ಕಾರ‍್ಯಕ್ರಮವನ್ನು ಸಂಯೋಜಿಸಿದರು. ಅಂತಿಮ ಬಿ.ಕಾಂ ವಿಧ್ಯಾರ್ಥಿನಿ ಡೆಲಿನಾ ನಿರೂಪಿಸಿದರು, ಸುಶ್ಮಿತಾ ಸ್ವಾಗತಿಸಿದರು, ಶ್ರೀದೇವಿ ವಂದಿಸಿದರು.

Exit mobile version