Kundapra.com ಕುಂದಾಪ್ರ ಡಾಟ್ ಕಾಂ

ಪರಿಷ್ಕೃತ ಆಟೋರಿಕ್ಷಾ ದರ ಏಪ್ರಿಲ್ 1 ರಿಂದ ಪಡೆಯಲು ಸೂಚನೆ: ತಪ್ಪಿದಲ್ಲಿ ಕಾನೂನು ಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಫೆಬ್ರವರಿ 6 ರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಏಪ್ರಿಲ್ 1 ರಿಂದ 1.5 ಕಿ.ಮೀಟರ್‌ವರೆಗೆ ಕನಿಷ್ಟ ದರ ರೂ.30.00, ನಂತರದ ಪ್ರತಿ ಕಿ.ಮೀಟರ್‌ಗೆ ದರ ರೂ.17.00 ರಂತೆ ದರ ಪರಿಷ್ಕರಿಸಿ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕೃತ ಮೀಟರ್ ದರವನ್ನು ಪ್ರಯಾಣಿಕರಿಂದ ಪಡೆಯುವಂತೆ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ಜಿಲ್ಲೆಯಲ್ಲಿ ಕೆಲವು ಆಟೋ ಚಾಲಕರು ಈಗಿನಿಂದಲೇ ಹೊಸ ದರ ಪಡೆಯುತ್ತಿರುವುದಾಗಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಪ್ರಾಧಿಕಾರಕ್ಕೆ ಬರುತ್ತಿವೆ. ಆದುದರಿಮದ ಉಡುಪಿ ಜಿಲ್ಲೆಯ ಎಲ್ಲಾ ಆಟೋರಿಕ್ಷಾ ಚಾಲಕ/ ಮಾಲಕರು ಏಪ್ರಿಲ್ 1 ರ ವರೆಗೆ ಕಡ್ಡಾಯವಾಗಿ ಈ ಹಿಂದೆ ನಿಗಧಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯುವಂತೆ ಸೂಚಿಸಲಾಗಿದ್ದು, ತಪ್ಪಿದಲ್ಲಿ ಅಂತಹ ಚಾಲಕ/ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version