Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಮಾರ್ಚ್ 02 : ಇಲ್ಲಿನ ಮಿನಿವಿಧಾನಸೌಧದಲ್ಲಿ ವ್ಯಕ್ತಿಯೋರ್ವ ಏಕಾಏಕಿ ಪಾಕಿಸ್ತಾನ ಪರ ಘೋಷಣೆ ಕೂಗಿ ಬಂಧಿತನಾದ ಘಟನೆ ನಡೆದಿದೆ. ಬಂಧಿತನನ್ನು ತಾಲೂಕಿನ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (42) ಎಂದು ತಿಳಿದುಬಂದಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಳಿಗ್ಗೆ ತಾಲೂಕು ಕಛೇರಿಗೆ ಆಗಮಿಸಿದ ಆತ ಪಾಕಿಸ್ತಾನ್ ಜಿಂದಾಬಾದ್, ಜಿಹಾದಿ ಜಿಂದಾಬಾದ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾನೆ. ಅಲ್ಲಿದ್ದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಂದಾಪುರ ಪೊಲೀಸ್ ಪಿಎಸೈ ಹರೀಶ್ ಆರ್. ಹಾಗೂ ಸಿಬ್ಬಂಧಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಆಪಾದಿತನ್ನು ಬಂಧಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ರಾಘವೇಂದ್ರ ಗಾಣಿಗ ಪದವೀಧರನಾಗಿದ್ದು ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ. ಆದರೆ ಎಂಟು ವರ್ಷಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಮದುವೆಯಾಗಿದ್ದು ಪತ್ನಿ, ಪುತ್ರಿಯನ್ನು ತೊರೆದು ತಂದೆ ತಾಯಿಯೊಂದಿಗೆ ವಾಸವಾಗಿದ್ದ ಎನ್ನಲಾಗಿದೆ.

ರಾಘವೇಂದ್ರ ಮಾನಸಿಕ ಅವಸ್ಥನಾಗಿದ್ದು, ಕಳೆದ ಎಂಟು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೂಡ ತಂದೆ ತಾಯಿಯೊಂದಿಗೆ ಕುಂದಾಪುರದ ಆಸ್ಪತ್ರೆಯೊಂದಿಗೆ ಬಂದ್ದಿದ್ದ ಆತ ಅಲ್ಲಿಂದ ತಪ್ಪಿಸಿಕೊಂಡು ಬಂದು ಪಾಕ್ ಪರ ಘೋಷಣೆ ಕೂಗಿದ್ದಾನೆಂದು ಆತನ ತಂದೆ ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇತ್ತಿಚಿಗೆ ಟಿವಿಗಳಲ್ಲಿ ಬರುತ್ತಿದ್ದ ಪಾಕಿಸ್ತಾನ ಪರ ಘೋಷಣೆಗೆ ಸಂಬಂಧಿತ ಸುದ್ದಿ ನೋಡುತ್ತಿದ್ದ ಆತ, ಅದರಿಂದಾಗಿ ಹೀಗೆ ಮಾಡಿರಬಹುದು ಎಂದಿದ್ದಾರೆ.

ಆಪಾದಿತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124(ಎ) ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ.

 

Exit mobile version