Kundapra.com ಕುಂದಾಪ್ರ ಡಾಟ್ ಕಾಂ

ಕರೋನಾ ವೈರಸ್ ಭಯ ಭೇಡ, ಎಚ್ಚರವಿರಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ನೊವಲ್ ಕರೋನಾ ವೈರಸ್ ಬಗ್ಗೆ ಇತ್ತೀಚೆಗೆ ಎಲ್ಲಡೆ ವ್ಯಾಪಕವಾಗಿ ಕೇಳಿಬರುತ್ತಿದ್ದು, ಇದು ಹೊಸ ವೈರಸ್ ಪ್ರಬೇಧವಾಗಿದ್ದು, ಈ ಹಿಂದೆ ಮನುಷ್ಯರಲ್ಲಿ ಕಂಡು ಬಂದಿರಲಿಲ್ಲ, ತಜ್ಞರ ಪ್ರಕಾರ ಇದು ಪ್ರಾಣಿ ಪ್ರಬೇಧದಲ್ಲಿ ಹುಟ್ಟಿದ್ದು, ನಂತರ ಮನುಷ್ಯರಲ್ಲಿ ಹರಡಿದೆ, ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ವೈರಸ್ ಪೀಡಿತ ವ್ಯಕ್ತಿಯಿಂದ(ಕೆಮ್ಮ ಅಥವಾ ಸೀನಿನ ಮೂಲಕ) ಅಥವಾ ಕಲುಷಿತ ಕೈಗಳಿಂದ ಅನ್ಯ ಕರೋನ ವೈರಸ್ ತಳಿಗಳು ಒಬ್ಬರಿಂದ ಒಬ್ಬರಿಗೆ ಹರಡಲಿವೆ.

ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಈ ರೋಗದ ಲಕ್ಷಣಗಳಾಗಿದ್ದು, ವೈರಸ್ ಸೋಂಕಿದ 14 ದಿನಗಳ ನಂತರ ರೋಗದ ಲಕ್ಷಣಗಳು ಕಂಡುಬರುತ್ತವೆ. ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೆಪನ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಸೋಕನ್ನು ದೃಡಪಡಿಸಿಕೊಳ್ಳಬಹುದು.

ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ನಿಮ್ಮ ಕೈಯನ್ನು ಚೆನ್ನಾಗಿ ಆಗಾಗ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೆಕು, ಅನಾರೋಗ್ಯದಿಂದಿರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳು ಇರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ, ಪ್ರಾಣಿಗಳ ನೇರ ಸಂಪರ್ಕವನ್ನು ಹಾಗೂ ಬೇಯಿಸಿದ/ಕಚ್ಚಾ ಮಾಂಸ ಸೇವನೆ ಮಾಡಬೇಡಿ.

ಸದ್ಯಕ್ಕೆ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲವಾಗಿದ್ದು, ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಕಿತ್ಸೆ ನೀಡಲಾಗುತ್ತಿದೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಆರೋಗ್ಯ ಕೇಂದ್ರಗಳನ್ನು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಬಹುದಾಗಿದೆ.

Exit mobile version