Kundapra.com ಕುಂದಾಪ್ರ ಡಾಟ್ ಕಾಂ

ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರ ಶೆಟ್ಟಿ ಮಾತನಾಡಿ ಮಾನವಿಕ ಶಾಸ್ತ್ರ ಎನ್ನುವುದು ಒಂದು ಅಧ್ಯಯನವಾಗಿರದೇ ಅದು ಕಲಿಯುವಿಕೆಯ ಆಸಕ್ತಿಯನ್ನು ಮೂಡಿಸಬೇಕು. ಇದರಲ್ಲಿ ಸಾಹಿತ್ಯದ ಮೇಳೈಸುವಿಕೆ ಇದ್ದಾಗ ಒಬ್ಬ ವಿದ್ಯಾರ್ಥಿಗೆ ಓದಿನ ರುಚಿಯನ್ನು ಅರ್ಥೈಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಾನವಿಕ ಶಾಸ್ತ್ರದ ಕಲಿಯುವಿಕೆ ಜಟಿಲವಾಗದಂತೆ ಮತ್ತು ತಿಳಿದುಕೊಳ್ಳಲು ಸಾಹಿತ್ಯವೆನ್ನುವುದು ಬೇಕೆಬೇಕು. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಸಾಹಿತ್ಯಕ್ಕೆ ಯಾವುದೇ ದೇಶ ಭಾಷೆ, ಸಂಸ್ಕೃತಿ, ಶಾಸ್ತ್ರಗಳ ಮೇರೆ ಇಲ್ಲ. ಎಲ್ಲೆಂದರಲ್ಲಿ ಸಾಹಿತ್ಯ ಸ್ಪುರಿಸುತ್ತದೆ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅಲ್ಲದೇ ಒಳ್ಳೆಯ ಸಾಹಿತ್ಯದ ಓದುಗರಾಗಬೇಕು. ಯಾಕೆಂದರೆ ನಮ್ಮ ಆಲೋಚನಾಲಹರಿ ಅದು ಚುರುಕನ್ನು ಮುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಧ್ಯಾಪಕರಾದ ಚೇತನ್ ಕುಮಾರ್ ಕೋವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಬಾಗದ ಮುಖ್ಯಸ್ಥರಾದ ಡಾ| ರೇಖಾ ಬನ್ನಾಡಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕರಾದ ಗಣಪತಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version