Site icon Kundapra.com ಕುಂದಾಪ್ರ ಡಾಟ್ ಕಾಂ

ಮೇಲ್‌ಗಂಗೊಳ್ಳಿ ಶಾಲೆಯ ದಾಖಲಾತಿ ಆಂದೋಲನ: ವಿಚಾರ ಸಂಕೀರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಮೇಲ್‌ಗಂಗೊಳ್ಳಿಯ ಸರಕಾರಿ ಕಿರಿಯ ಹಾಗೂ ಪೂರ್ವ ಪ್ರಾಥಮಿಕ (ಹವೇ) ಶಾಲೆ ವತಿಯಿಂದ ದಾಖಲಾತಿ ಆಂದೋಲನ-ವಿಚಾರ ಸಂಕೀರ್ಣ ಡಾ.ಅಂಬೇಡ್ಕರ್ ಸಭಾಭವನದಲ್ಲಿ ವಠಾರದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ, ಕನ್ನಡ ಶಾಲೆ ಉಳಿಸಿ ಎಂಬ ಅಭಿಯಾನದಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯಲಿದೆ. ಪ್ರತಿಯೊಬ್ಬರೂ ಕನ್ನಡ ಶಾಲೆ ಉಳಿಸಿ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಈಶ್ವರ, ದಿಲ್‌ಶಾದ್, ಪಲ್ಲವಿ, ಮೀನಾಕ್ಷಿ, ದೀಪಾ ಖಾರ್ವಿ, ನೇತ್ರಾವತಿ, ಆಶಾ ಖಾರ್ವಿ, ಅನಿತಾ ಖಾರ್ವಿ, ಲಕ್ಷ್ಮೀ, ತುಳಸಿ, ನಟರಾಜ್, ಸುಮಿತ್, ಶಾರದಾ ಮೊದಲಾದವರು ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಸುನೀತಾ ದಿನೇಶ್ ಸ್ವಾಗತಿಸಿದರು. ಸಹಶಿಕ್ಷಕಿ ಲಲಿತಾ ಟೀಚರ್ ವಂದಿಸಿದರು.

Exit mobile version