Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿಗಳಿಂದ ಕಾಳಾವರದ ಏಸ್ ಬಾಂಡ್ ಕಂಪೆನಿಗೆ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಾಲೇಜಿನ ವಾಣಿಜ್ಯ – ನಿರ್ವಹಣಾ ಸಂಘ ಮತ್ತು ಉದ್ಯಮಶೀಲತೆ ಕೇಂದ್ರದ ವತಿಯಿಂದ ಕೈಗಾರಿಕಾ ಭೇಟಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಕೋಟೇಶ್ವರ ಸಮೀಪದ ಕಾಳಾವರದಲ್ಲಿ ಇರುವ ಏಸ್ ಬಾಂಡ್ ಕಂಪೆನಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ಅದೇ ವೇಳೆಯಲ್ಲಿ ಏಸ್ ಬಾಂಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ಅವರು ಕಂಪೆನಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಯೋಜಕರಾದ ವೀಣಾ ಭಟ್ ಮತ್ತು ಸ್ವಸ್ತಿ ಆರ್. ಶೆಟ್ಟಿ, ಉದ್ಯಮಶೀಲತೆ ಕೇಂದ್ರದ ಸಂಯೋಜಕರಾದ ಯೋಗೀಶ್ ಶಾನುಭೋಗ್ ಮತ್ತು ಧನಶ್ರೀ ಎಮ್. ಕಿಣಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

Exit mobile version