Kundapra.com ಕುಂದಾಪ್ರ ಡಾಟ್ ಕಾಂ

ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ: ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಹಾಗೂ ಅಷ್ಟಬಂಧ ಸಹಸ್ರ ಕಲಶ, ಬ್ರಹ್ಮಕುಂಬಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆಗೆ ಕಾರ್ಯಕ್ರಮ ಮಾಚ್ 27ರಿಂದ ಎಪ್ರಿಲ್ 04ರ ತನಕ ಜರುಗಲಿದ್ದು, ಪೂರ್ವಭಾವಿಯಾಗಿ ಬುಧವಾರ ದೇವಳದ ವಠಾರದಲ್ಲಿ ಚಪ್ಪರ ಮುಹೂರ್ತ ಜರುಗಿತು.

ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರುಗಳಾಗ ಗಣಪಯ್ಯ ಹಾಗೂ ವೆಂಕಟಾಚಲ ಮಯ್ಯ ಅವರ ಮಾರ್ಗದರ್ಶನದಲ್ಲಿ ಚಪ್ಪರ ಮೂಹೂರ್ತ ಕಾರ್ಯ ನಡೆಯಿತು. ಈ ಸಂದರ್ಭ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಚಂದ್ರಶೇಖರ ಶೆಟ್ಟಿ ಕಳವಾಡಿ, ಕೆ. ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಿವಾಕರ ಹೆಗ್ಡೆ ಕಳವಾಡಿ, ಕಾರ್ಯದರ್ಶಿ ಸಂಜೀವ ಆಚಾರ್ಯ, ಉತ್ಸವ ಸಮಿತಿ ಅಧ್ಯಕ್ಷರಾದ ಹೆಚ್. ವಸಂತ ಹೆಗ್ಡೆ ಕಳವಾಡಿ, ದೇವಳದ ಟ್ರಸ್ಟೀಗಳಾದ ಎಸ್. ರಾಜು ಪೂಜಾರಿ ಯಡ್ತರೆ, ರಾಮ ಮೊಗವೀರ ಕಳವಾಡಿ, ಸೀತಾರಾಮ ಕೊಠಾರಿ, ಸುಬ್ಬಣ್ಣ ಶೆಟ್ಟಿ ಸಣ್ಮನೆ, ನಾಗಯ್ಯ ದೇವಾಡಿಗ ಕಳವಾಡಿ ಅಣ್ಣಪ್ಪ ಗಾಣಿಗ, ಚಪ್ಪರ ಸಮಿತಿ ಸಂಚಾಲಕ ರಾಜು ಮೊಗವೀರ, ಸುಬ್ಬಯ್ಯ ಪೂಜಾರಿ, ದೊಟ್ಟಯ್ಯ ಪೂಜಾರಿ ಕಳವಾಡಿ, ಪ್ರದೀಪ್‌ಕುಮಾರ್ ಶೆಟ್ಟಿ ಕಾರಿಕಟ್ಟೆ, ರವಿರಾಜ್ ಚಂದನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Exit mobile version