Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ, ಉಪ್ಪುಂದದಲ್ಲಿ ಮೀನುಗಾರರಿಂದ ಸಮುದ್ರಪೂಜೆ

ಕುಂದಾಪುರ: ತಾಲೂಕಿನ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ವತಿಯಿಂದ ಮರವಂತೆಯ ಶ್ರೀ ವರಾಹಸ್ವಾಮಿ ದೇವರ ಸನ್ನಿಧಿಯಲ್ಲಿ ಮೀನುಗಾರರು ಸಾಮೂಹಿಕವಾಗಿ ಸಮುದ್ರ ಪೂಜೆ ನೆರವೇರಿಸಿದರು.

ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಮಂಜು ಬಿಲ್ಲವ ಮತ್ತು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕುಮಾರ್ ನೇತೃತ್ವದಲ್ಲಿ ಮರವಂತೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಅರಮ ದೇವಸ್ಥಾನ (ಬೊಬ್ಬರ್ಯ) ಮತ್ತು ಶ್ರೀ ವರಾಹ, ಶ್ರೀ ವಿಷ್ಣು ಮತ್ತು ಶ್ರೀ ನರಸಿಂಹ ದೇವಸ್ಥಾನ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು.

ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ಮಾಜಿ ಕಾರ್ಯದರ್ಶಿ ಬಿ.ಸುರೇಶ ಬಂಗೇರ ಕೋಡಿ, ಕಾರ್ಯದರ್ಶಿ ನಾಗಪ್ಪಯ್ಯ ಪಟೇಲ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ಬಿ.ಮಹೇಶ ಖಾರ್ವಿ, ಕೆ.ಎಂ.ಸೋಮಶೇಖರ, ಕಾರ್ಯದರ್ಶಿ ಶೇಖರ ಖಾರ್ವಿ, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ, ಶ್ರೀ ರಾಮ ಮಂದಿರ ಸೇವಾಸಮಿತಿ ಅಧ್ಯಕ್ಷ ಬಿ.ವೆಂಕಟರಮಣ ಖಾರ್ವಿ ಮರವಂತೆ, ಹಕ್ರೆಮಠ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಕೇಶವ ಖಾರ್ವಿ, ಕಂಚುಗೋಡು ಶ್ರೀ ರಾಮ ಮಂದಿರದ ಅಧ್ಯಕ್ಷ ಮಡಿ ಶಂಕರ ಖಾರ್ವಿ, ಗಂಗೊಳ್ಳಿ ಹಾಗೂ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯರು, ಮೀನುಗಾರರು ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು: ಮಡಿಕಲ್ ನಾಡದೋಣಿ ಮೀನುಗಾರರು ಸಾಮೂಹಿಕವಾಗಿ ಸಮುದ್ರಪೂಜೆ ನೆರವೇರಿಸಿದರು. ಮೀನುಗಾರರ ಮುಖಂಡ ಕೊಂಬಾಡಿ ನಾಗ ಖಾರ್ವಿ, ಸರಮಕೋಡಿ ಶ್ರೀ ಮಹಾ‌ಈಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಿ. ಶ್ರೀಧರ ಖಾರ್ವಿ, ಸೇವಾ ಸಮಿತಿ ಅಧ್ಯಕ್ಷ ಮುರಳೀಧರ್ ಖಾರ್ವಿ, ಉಪ್ಪುಂದ ಗ್ರಾಪಂ ಸದಸ್ಯ ರಾಮಚಂದ್ರ ಖಾರ್ವಿ ಮುಂತಾದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Exit mobile version