Kundapra.com ಕುಂದಾಪ್ರ ಡಾಟ್ ಕಾಂ

ನಮ್ಮಭೂಮಿ ವೃತ್ತಿತರಬೇತಿ ಮಕ್ಕಳಿಂದ ಹಟ್ಟಿಯಂಗಡಿ ಕರ್ನಾಟಕ ಬ್ಯಾಂಕಿಗೆ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದಿ ಕನ್ಸರ‍್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ನಮ್ಮಭೂಮಿ ಇಲ್ಲಿನ ವೃತ್ತಿ ತರಬೇತಿಯ ಮಕ್ಕಳು ಅವರ ಪಠ್ಯಕ್ರಮದ ಒಂದು ಭಾಗವಾಗಿ ಸಮೀಪದ ಹಟ್ಟಿಯಂಗಡಿಯ ಕರ್ನಾಟಕ ಬ್ಯಾಂಕ್‌ಗೆ ಕ್ಷೇತ್ರ ಭೇಟಿಯನ್ನು ಹಮ್ಮಿಕೊಂಡಿದ್ದರು.

ಕರ್ನಾಟಕ ಬ್ಯಾಂಕ್‌ನ ಪ್ರಬಂಧಕರಾದ ವಿನಾಯಕ ಅವರೊಂದಿಗೆ ಸಂದರ್ಶನ ನಡೆಸಿದರು. ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದು ಹೇಗೆ, ಖಾತೆಗಳ ವಿಧಗಳು, ವಿವಿಧ ಉಳಿತಾಯ ಯೋಜನೆಗಳು ಸಾಲ ನೀಡುವ ವ್ಯವಸ್ಥೆ, ಭದ್ರತಾ ಕೋಣೆ, ಬ್ಯಾಂಕ್‌ನಲ್ಲಿನ ಫೈರಿಂಗ್ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾ ಆಳವಡಿಕೆ ಮತ್ತು ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಅಲಾರ್ಮ್ ವ್ಯವಸ್ಥೆ ಮುಂತಾದವುಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಕ್ಕಳು ಪಡೆದುಕೊಂಡರು. ಈ ಕ್ಷೇತ್ರ ಭೇಟಿಯಲ್ಲಿ ವಿವಿಧ ವೃತ್ತಿ ತರಬೇತಿಯ 44 ಮಕ್ಕಳು ಮತ್ತು ನಮ್ಮಭೂಮಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version