Site icon Kundapra.com ಕುಂದಾಪ್ರ ಡಾಟ್ ಕಾಂ

ನಮ್ಮಭೂಮಿ ವೃತ್ತಿ ತರಬೇತಿ ಮಕ್ಕಳಿಂದ ಅಂಚೆ ಕಛೇರಿಗೆ ಕ್ಷೇತ್ರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದಿ ಕನ್ಸರ‍್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ನಮ್ಮಭೂಮಿ ಇಲ್ಲಿನ ವೃತ್ತಿ ತರಬೇತಿಯ ಮಕ್ಕಳು ಅವರ ಪಠ್ಯಕ್ರಮದ ಒಂದು ಭಾಗವಾಗಿ ಸಮೀಪದ ಹಟ್ಟಿಯಂಗಡಿಯಲ್ಲಿರುವ ಅಂಚೆ ಕಛೇರಿಗೆ ಭೇಟಿ ನೀಡಿ ಸಂದರ್ಶನ ನಡೆಸಿದರು.

ಅಲ್ಲಿನ ಪೋಸ್ಟ್ ಮಾಸ್ಟರ್ ಲವ ಪೂಜಾರಿ ಅವರು ನಮ್ಮಭೂಮಿಯ ಮಕ್ಕಳಿಗೆ ಅಂಚೆ ಕಛೇರಿಯ 150 ವರ್ಷಗಳ ಹಿಂದಿನ ಇತಿಹಾಸವನ್ನು ಪರಿಚಯಿಸಿದರು. ವಿವಿಧ ಸೇವೆಗಳಾದ ಸ್ಪೀಡ್ ಪೋಸ್ಟ್, ಸಾಮಾನ್ಯ ಪೋಸ್ಟ್, ರಿಜಿಸ್ಟರ್ ಪೋಸ್ಟ್, ಅಂಚೆ ಚೀಟಿಗಳು, ವಿದ್ಯುನ್ಮಾನ ಹಣ ವರ್ಗಾವಣೆ (ಇ-ಎಂ.ಓ) ವ್ಯವಸ್ಥೆಗಳು ಹಾಗೂ ಪೋಸ್ಟ್ ಆಫೀಸ್ ಉಳಿತಾಯ ಖಾತೆ, ಹಿರಿಯ ನಾಗರಿಕರಿಗಾಗಿ, ಹೆಣ್ಣು ಮಕ್ಕಳಿಗಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ(ಸುಕನ್ಯಾ ಸಮೃದ್ಧಿ ಯೋಜನೆ) ಮುಂತಾದ ಉಳಿತಾಯ ಯೋಜನೆಗಳ ಬಗ್ಗೆ ಹಾಗೂ ದಿನ ನಿತ್ಯದ ಕಾರ್ಯವೈಖರಿಯ ಬಗ್ಗೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸರಳವಾದ ಉತ್ತರದ ಮೂಲಕ ಅಂಚೆ ಕಛೇರಿಯ ಕಾರ್ಯನಿರ್ವಹಣಾ ವ್ಯವಸ್ಥೆಯ ಮಾಹಿತಿಗಳನ್ನು ನೀಡಿದರು. ಈ ಕ್ಷೇತ್ರ ಭೇಟಿಯಲ್ಲಿ ವಿವಿಧ ವೃತ್ತಿ ತರಬೇತಿಯ 44 ಮಕ್ಕಳು ಹಾಗೂ ನಮ್ಮಭೂಮಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version