Site icon Kundapra.com ಕುಂದಾಪ್ರ ಡಾಟ್ ಕಾಂ

ಜು. 5 ರಂದು ಯಕ್ಷಗಾನ ಪ್ರಿಯರ ಸಮಾಲೋಚನ ಸಭೆ

ಮುಂಬಯಿ : ಡೊಂಬಿ ವಲಿಯ ಯಕ್ಷಗಾನ ಪ್ರಿಯರ ವತಿಯಿಂದ ಸಮಾಲೋಚನ ಸಭೆ ಜು. 5ರಂದು ಸಂಜೆ 6.30ರಿಂದ ಡೊಂಬಿವಲಿ (ಪೂ.) ತಿಲಕ್‌ ನಗರದ ಡಾ| ಆರ್‌. ಪಿ. ಮಾರ್ಗದ ಫ್ರೆಂಡ್ಸ್‌ ಬುಕ್‌ ಸ್ಟೋರ್ನ ಸ್ವಾವಲಂಬನಾ ಕೇಂದ್ರದಲ್ಲಿ ಜರಗಲಿದೆ.

ಯಕ್ಷಗಾನ ಕರಾವಳಿಯ ಜನಪ್ರಿಯ ಕಲೆಯಾಗಿದ್ದು, ಮಳೆ ಗಾಲದ ಸಮಯದಲ್ಲಿ ಹಲವಾರು ಪ್ರಸಿದ್ಧ ಯಕ್ಷಗಾನ ವೃತ್ತಿ ಮೇಳಗಳು ಊರಿನಿಂದ ಮುಂಬಯಿಗೆ ಪ್ರವಾಸ ಮಾಡುತ್ತಿದ್ದು, ಡೊಂಬಿ ವಲಿಯಲ್ಲಿರುವ ಕನ್ನಡಿಗರಿಗೆ ಯಕ್ಷಗಾನ, ತಾಳಮದ್ದಳೆಯನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಶಾಂತಿ ಜಿ. ಶೆಟ್ಟಿ ನೀರೆ (9967599491), ಪ್ರಾ| ವೆಂಕಟೇಶ್‌ ಪೈ (92241020053) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Exit mobile version