Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ವತಿಯಿಂದ ಶುಕ್ರವಾರ ವಿವಿಧ ಗ್ರಾಮಗಳ ಅಗತ್ಯವುಳ್ಳ ಸಾರ್ವಜನಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬೈಂದೂರು ತಾಲೂಕಿನ ಎಲ್ಲೂರು, ಗೋಳಿಹೊಳೆ, ಬೈಂದೂರು, ಉಪ್ಪುಂದ, ಹೆರಂಜಾಲು ಗ್ರಾಮಗಳಲ್ಲಿ ಸುಮಾರು 110 ಕುಟುಂಬಕ್ಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ಆಹಾರ ಸಾಮಾಗ್ರಿ ಕಿಟ್‌ನಲ್ಲಿ ಐದು ಕೆಜಿ ಅಕ್ಕಿ, ನಾಲ್ಕು ಕೆ.ಜಿ ಬೇಳೆ, ಸಕ್ಕರೆ, ಚಹಾಪುಡಿ, ಅಡುಗೆ ಎಣ್ಣೆ ಸೇರಿದ್ದವು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಟ್ರಸ್ಟ್‌ನ ಸದಸ್ಯರಾದ ಸುಧಾಕರ ಪೂಜಾರಿ, ರಾಘವೇಂದ್ರ ಪೂಜಾರಿ ಇದ್ದರು.

ಬಿಜೂರು ಗ್ರಾಮದಲ್ಲಿಯೂ ಶನಿವಾರ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುವ ಬಗ್ಗೆ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರು ತಿಳಿಸಿದ್ದು, ಅಗತ್ಯವುಳ್ಳವರು ಸಂಪರ್ಕಿಸಬಹುದು ಎಂದಿದ್ದಾರೆ.

 

Exit mobile version