Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಗರ್ ಕ್ರೆಡಿಟ್ ಕೋ- ಆಪರೇಟಿವ್: ಆಹಾರ ಸಾಮಾಗ್ರಿ ಖರೀದಿಗೆ 50 ಸಾವಿರ ರೂ. ದೇಣಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸಾಗರ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ವತಿಯಿಂದ ಸಂಕಷ್ಟದಲ್ಲಿರುವವರಿಗಾಗಿ ಆಹಾರ ಸಾಮಾಗ್ರಿ ಮತ್ತು ಔಷಧಿ ಖರೀದಿಗಾಗಿ ರೂ. 50,000ಮೌಲ್ಯ ಚೆಕ್ ಬೈಂದೂರು ತಹಶೀಲ್ದಾರರಿಗೆ ಹಸ್ತಾಂತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂಸ್ಥೆಯ ವತಿಯಿಂದ  ರೂ. 50,000 ಚೆಕ್‌ನ್ನು ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಯುವ ಮುಂದಾಳು ಶೇಖರ ಪೂಜಾರಿ ಇದ್ದರು.

 

 

Exit mobile version