Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾ. ಘಟಕ: ಬಡ ಕುಟುಂಬಕ್ಕೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಿರೂರಿನ ದಾಸನಾಡಿ, ಮುದ್ರಮಕ್ಕಿ, ಬೈಂದೂರು ಹಾಗೂ ಹಳಗೇರಿಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು ಹಾಗೂ ಅಗತ್ಯವುಳ್ಳ ಬಡ ಕುಟುಂಬಕ್ಕೆ ಮುಸ್ಲಿಂ ಒಕ್ಕೂಟ ತಾಲೂಕು ಘಟಕದಿಂದ ಅಕ್ಕಿ, ಬೆಳೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಶಿರೂರಿನಲ್ಲಿ ವಿತರಿಸುವ ವೇಳೆ ಬೈಂದೂರು ಠಾಣಾ ಪಿಎಸೈ ಸಂಗೀತಾ, ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ಸಂತೋಷ್, ನಾಗೇಶ್ ಮತ್ತು ಸುಧೀರ್, ತಾಲೂಕು ಘಟಕದ ಅಧ್ಯಕ್ಷರಾದ ಹಸನ್ ಮಾವಡ್, ಜಿಲ್ಲಾ ಸಮಿತಿ ಸದಸ್ಯ ತಬ್ರೇಜ್ ನಾಗೂರು ಇದ್ದರು.

ಲಾಕ್‌ಡೌನ್ ಸಂದರ್ಭ ಬಡವರು ಹಾಗೂ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿ ದೊರೆಯುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅಂದಾಜು ರೂ.2000 ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಇತರೆ ಅಗತ್ಯವುಳ್ಳವರನ್ನು ಕಂಡುಬಂದರೆ ಅವರಿಗೂ ವಿತರಿಸಲಾಗುವುದು. ಕರೋನಾ ಭೀತಿ ಇರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. – ಹಸನ್ ಮಾವಡ, ಅಧ್ಯಕ್ಷರು ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕ

Exit mobile version