Site icon Kundapra.com ಕುಂದಾಪ್ರ ಡಾಟ್ ಕಾಂ

108 ವರ್ಷದ ಹಿರಿಯಜ್ಜಿ ನಾಗಮ್ಮ ಶೆಡ್ತಿ ಮರಣ

ಬೈಂದೂರು: ಸಮೀಪದ ಕಾಲ್ತೋಡು ಗ್ರಾಮದ ಹಳೇಕಾಲ್ತೋಡುವಿನ 108 ವರ್ಷದ ಹಿರಿಯಜ್ಜಿ ನಾಗಮ್ಮ ಶೆಡ್ತಿ ಎಂಬುವವರು ಶಿರೂರು ಹೊಸ್ಮನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೃಷಿಕುಟುಂಬಕ್ಕೆ ಸೇರಿದ ಇವರು ತಮ್ಮ ಜೀವನದ ಕೊನೆಯ ಕಾಲದವರೆಗೂ ಆರೋಗ್ಯವಂತರಾಗಿದ್ದರು.

ಕೆಲವಾರು ವರ್ಷಗಳ ಹಿಂದೆ ಊರಿನ ನಾಟಿ ಪ್ರಸೂತಿ ವೈದ್ಯೆಯಾಗಿದ್ದ ನಾಗಮ್ಮ ಶೆಡ್ತಿಯವರು ಈ ಪರಿಸರದವರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Exit mobile version