Site icon Kundapra.com ಕುಂದಾಪ್ರ ಡಾಟ್ ಕಾಂ

ಹಳಗೇರಿ: 60,000 ರೂ. ಮೌಲ್ಯದ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಯನ್ಸ್ ಕ್ಲಬ್ ಬಂದೂರು -ಉಪ್ಪುಂದ, ರೋಟರಿ ಕುಂದಾಪುರ ಮಿಡ್‌ಟೌನ್ ಹಾಗೂ ಕೊಕ್ಕೇಶ್ವರೀ ಭಜನಾ ಮಂಡಳಿ ವತಿಯಿಂದ ಹಳಗೇರಿಯ ನಿವಾಸಿಗಳಿಗೆ ಇತ್ತಿಚಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಕಿಟ್ ವಿತರಿಸಿದ ಬೈಂದೂರು ಪೊಲೀಸ್ ಉಪನಿರೀಕ್ಷಕಿ ಸಂಗೀತಾ ಮಾತನಾಡಿ, ಜನರ ಸಹಕಾರದಿಂದ ಮಾತ್ರವೇ ಕೊರೋನಾ ಹರಡುವಿಕೆ ತಡೆಗಟ್ಟಲು ಸಾಧ್ಯವಿದೆ. ಪೊಲೀಸರು, ವೈದ್ಯರು ಸೇರಿದಂತೆ ಹಲವರು ಜನರ ಸುರಕ್ಷತೆಗಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಜನರು ಮನೆಯಲ್ಲಿದ್ದು ಆರೋಗ್ಯದ ಜಾಗೃತಿ ಮಾಡಿಕೊಳ್ಳುವುದು ಅಗತ್ಯ ಎಂದರು.

ಹಳಗೇರಿ ಹಾಗೂ ಸುತ್ತುಮುತ್ತಲಿನ ಪ್ರದೇಶ ಸುಮಾರು 60 ಮಹಿಳೆಯರಿಗೆ ರೂ. 60,000 ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಅಧ್ಯಕ್ಷ ನಳಿನ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಸುನೀಲ್ ಪೂಜಾರಿ, ಜಯಶೀಲ ಶೆಟ್ಟಿ, ಗೋಪಾಲ ಶೆಟ್ಟಿ, ರಾಜೇಂದ್ರ ಹಳಗೇರಿ, ರವಿರಾಜ್ ಶೆಟ್ಟಿ, ರಾಮಕೃಷ್ಣ ಕಾರಂತ, ಶಿಕ್ಷಕ ವಿಶ್ವನಾಥ ಶೆಟ್ಟಿ ಮೊದಲಾದವರು ಇದ್ದರು.

Exit mobile version