Site icon Kundapra.com ಕುಂದಾಪ್ರ ಡಾಟ್ ಕಾಂ

ತುರ್ತಾಗಿ ಜೌಷಧ ತಲುಪಿಸಿದ ಶಿವಮೊಗ್ಗ ಸಂಸದರ ಮೊಬೈಲ್ ಹೆಲ್ಪ್‌ಡೆಸ್ಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್‌ಡೌನ್ ಸಂದರ್ಭ ಅಗತ್ಯ ನೆರವು ನೀಡುವ ಸಲುವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಆರಂಭಿಸಿದ ಮೊಬೈಲ್ ಹೆಲ್ಪ್ ಡೆಸ್ಕ್ ಸೇವೆ ಸಂಕಷ್ಟದಲ್ಲಿರುವವರಿಗೆ ವಿವಿಧ ಹಂತದಲ್ಲಿ ಉಪಯೋಗವಾಗುತ್ತಿದೆ.

ಬೈಂದೂರು ತಾಲೂಕು ವ್ಯಾಪ್ತಿಯ ಮುದೂರು ಗ್ರಾಮದಲ್ಲಿ ವಾಸವಿದ್ದ ಕುಟುಂಬದ ಮಗುವಿಗೆ ಪೀಡ್ಸ್ ಕಾಯಿಲೆಯಿದ್ದು, ಶಿವಮೊಗ್ಗ ಮಾನಸಾ ಆಸ್ಪತ್ರೆಯಿಂದ ತುರ್ತಾಗಿ ತರಬೇಕಾಗಿದ್ದ ಔಷಧಿಗಾಗಿ ಮುದೂರು ವಿ.ಎ ವೀರೇಶ್ ಅವರ ಮೂಲಕ ಬೇಡಿಕೆ ಇಟ್ಟಿದ್ದು, ತಕ್ಷಣ ಸ್ಪಂದಿಸಿದ ಹೆಲ್ಪ್‌ಡೆಸ್ಕ್ ತಂಡ ಶಿವಮೊಗ್ಗ ಆಸ್ಪತ್ರೆಯಿಂದ ಸ್ಥಳೀಯ ಸರ್ವೆಯರ್ ಪ್ರವೀಣ್ ಕುಮಾರ್ ಅವರ ಮೂಲಕ ನಿಟ್ಟೂರು ತನಕ ಹಾಗೂ ನಿಟ್ಟೂರಿನಿಂದ ಯಡ್ತರೆ ವಿ.ಎ ಮಂಜು ಹಾಗೂ ಸಂಸದರ ಆಪ್ತ ಸಹಾಯಕ ಶಿವಕುಮಾರ್ ಅವರು ಮುದೂರಿಗೆ ತಂದು ವ್ಯಕ್ತಿಯ ಮನೆಗೆ ತೆರಳಿ ಉಚಿತವಾಗಿ ಔಷಧಿಯನ್ನು ತಲುಪಿಸಿದರು.

ಹೆಲ್ಪ್ ಡೆಸ್ಕ್‌ಗೆ ಆಹಾರ ಸಾಮಾಗ್ರಿ, ಔಷಧಿ ಸೇರಿದಂತೆ ವಿವಿಧ ಸಹಾಯಕ್ಕಾಗಿ ಕರೆ ಬರುತ್ತಿದ್ದು, ಆದ್ಯತೆಯಂತೆ ಸ್ಪಂದಿಸಲಾಗುತ್ತಿದೆ ಎಂದು ಸಂಸದ ಮೊಬೈಲ್ ಹೆಲ್ಪ್‌ಡೆಸ್ಕ್ ಬೈಂದೂರು ವಿಧಾನಸಭಾ ಕ್ಷೇತ್ರದ ಸಿಬ್ಬಂದಿಗಳು ತಿಳಿಸಿದ್ದರೆ.

Exit mobile version