Kundapra.com ಕುಂದಾಪ್ರ ಡಾಟ್ ಕಾಂ

ಡಾ. ಜಿ. ಪ್ರಕಾಶ ಕೊಡಂಚ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಖಂಬದಕೋಣೆಯಲ್ಲಿ ಹಲವು ವರ್ಷಗಳಿಂದ ವೈದ್ಯ ವೃತ್ತಿ ನಿರತರಾಗಿದ್ದ ಗುಜ್ಜಾಡಿ ಮೂಲದ ಡಾ. ಪ್ರಕಾಶ ಕೊಡಂಚ (75) ಕೆಲಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು. ವೈದ್ಯ ವೃತ್ತಿಯ ಜತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಅವರ ಪುತ್ರರಾದ ಪ್ರತಾಪ ಕೊಡಂಚ ಅಮೇರಿಕೆಯಲ್ಲಿ ಇಂಜಿನಿಯರ್ ಆಗಿ, ಡಾ. ಪ್ರಭಾತ ಕೊಡಂಚ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ದುಡಿಯುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ಅವರಿಗೆ ಬರಲಾಗದ್ದರಿಂದ ಬಂದು-ಮಿತ್ರರು ಮಂಗಳವಾರ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು.

 

Exit mobile version