ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಮಹಾಸತಿ ಫಿಲ್ಮ್ಸ್ ಹಾಗೂ ಕೆಎ20 ಕುಂದಾಪುರ ಕನ್ನಡಿಗರು ಪ್ರಸ್ತುತ ಪಡಿಸಿದ ಕಡಲ ಸಾಹಸಿ ವೀಡಿಯೋ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುಂದರ ಸಾಹಿತ್ಯಕ್ಕೆ, ಹದವಾದ ಸಂಗೀತ, ಅದಕ್ಕೆ ತಕ್ಕಂತ ನಿರ್ದೇಶನ, ಚಿತ್ರೀಕರಣ ಹಾಗೂ ಸಂಕಲನ ಮಾಡಿರುವ ಯುವ ಬಳಗ ಉತ್ತಮ ಉತ್ತಮ ಅಭಿರುಚಿಯ ಕೊಡುಗೆಯನ್ನೇ ನೀಡಿದೆ. ಹಾಡಿನ ಮೂಲಕ ಕಡಲ ಮಕ್ಕಳ ಒಡಲಾಳದ ಕಥೆಯನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಾಡನ್ನು ಸಚಿನ್ ಆಲೂರು ನಿರ್ದೇಶನ ಮಾಡಿದ್ದು, ಸಚಿನ್ ಬಿ. ಶೇರುಗಾರ್ ಸಾಹಿತ್ಯ ಬರೆದಿದ್ದಾರೆ. ರೋಹಿತ್ ಎಸ್.ಕೆ ಧ್ವನಿಯಾಗಿದ್ದರೇ, ಮಿಲ್ಟನ್ ನಜರತ್ ಸಂಗೀತ್ ನೀಡಿದ್ದಾರೆ. ಅಭಿಷೇಕ್ ರಾವ್ ಸಂಕಲನ ಹಾಗೂ ರಚಿನ್ ಶೆಟ್ಟಿ ಡಿಒಪಿ ಮಾಡಿದ್ದಾರೆ.
ಒಮ್ಮೆ ವೀಕ್ಷಿಸಿ

