ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ ಲಾಕ್‌ಡೌನ್ ಸಮಯದಲ್ಲಿ ವಿನೂತನ ಪ್ರಯೋಗವಾಗಿ ಚೆಸ್ ವಿಧ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಚೆಸ್ ಪಂದ್ಯಾಟವನ್ನು ಮೇ 15ರಿಂದ ಆಯೋಜಿಸಿದೆ. ಈಗಾಗಲೇ ಕಶ್ವಿ ಚೆಸ್ ಸ್ಕೂಲ್‌ನ ವಿಧ್ಯಾರ್ಥಿಗಳು ಈ ಪಂದ್ಯಾಟವನ್ನು ಪ್ರತಿನಿತ್ಯ ಆಟವಾಡುತ್ತಿದ್ದು ಅತ್ಯಂತ ಯಶಸ್ವಿಯಾಗಿದೆ. ಮನೆಯಲ್ಲಿಯೇ ಕುಳಿತು ಆಟವಾಡುವುದರಿಂದ ತಮ್ಮ ಸಮಯವನ್ನು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಹಾಗೂ ಮುಂದೆ ನಡೆಯುವ ಚೆಸ್ ಪಂದ್ಯಾವಳಿಗೆ ಅನುಕೂಲವಾಗಲಿದೆ.
ಇದರ ಮುಂದಿನ ಹಂತವಾಗಿ ಕುಂದಾಪುರ ತಾಲೂಕು ಪರಿಸರದ ಇತರ ಚೆಸ್ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂದ್ಯಾವಳಿಯ ಮಾಹಿತಿ ಇಲ್ಲಿದೆ. http://kashvichessschool.in/ ವೆಬ್‌ಸೈಟ್‌ನಲ್ಲಿರುವ https://lichess.org/tournament/ ಲಿಂಕ್‌ನ ಮೂಲಕ ಈ ಪಂದ್ಯಾಟವನ್ನು ಆಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7899969063 ದೂರವಾಣಿಯಲ್ಲಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಪ್ರತಿನಿತ್ಯ ಸಂಜೆ 5 ರಿಂದ 6 ಗಂಟೆಯವರೆಗೆ ಈ ಪಂದ್ಯಾವಳಿ ನಡೆಯಲಿದ್ದು ಎಂದು ಕಶ್ವಿ ಚೆಸ್ ಸ್ಕೂಲ್‌ನ ಸ್ಥಾಪಕ ನರೇಶ್ ಬಿ. ಮಾಹಿತಿ ನೀಡಿದ್ದಾರೆ.

