Site icon Kundapra.com ಕುಂದಾಪ್ರ ಡಾಟ್ ಕಾಂ

ಕಂದಾಯ ನೌಕರನಿಂದ ಮಹಿಳೆಯರಿಗೆ ಕಿರುಕುಳ: ದೂರು

ಕುಂದಾಪುರ: ಪಂಚಾಯತಿಯಲ್ಲಿ ಕೆಲಸ ಮಾಡುವ ಉಗ್ರಾಣಿಯೊಬ್ಬ ಸರ್ಕಾರಿ ಕೆಲಸಕ್ಕಾಗಿ ಬಂದಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಪಂಚಾಯತಿಯಲ್ಲಿ ಉಗ್ರಾಣಿಯಾಗಿ ಕೆಲಸ ಮಾಡುವ ಉಮೇಶ್ ಎಂಬಾತ ಈ ಪ್ರಕರಣದಲ್ಲಿ ಆರೋಪಿ.

ಪಡಿತರ ಚೀಟಿಗಾಗಿ ಹಲವಾರು ದಿನದಿಂದ ಸತಾಯಿಸುತ್ತಿದ್ದ ಉಮೇಶ್ ಮಹಿಳೆಯೊಬ್ಬರಿಗೆ ಜೂನ್ 26ರಂದು ಕಛೇರಿಗೆ ಬರಲು ಹೇಳಿದ್ದ. ತದನಂತರ ದಿನವೂ ಆಕೆಯನ್ನು ಸತಾಯಿಸುತ್ತಿದ್ದ ಆರೋಪಿ ಇಂದು ಆಕೆಗೆ ಕಛೇರಿಗೆ ಬರುವಂತೆ ತಿಳಿಸಿದ್ದ. ಆಕೆ ಕಛೇರಿಗೆ ಬಂದಾಗ ಆಕೆಯ ಮೈ ಮುಟ್ಟಲು ಯತ್ನಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ತಕ್ಷಣ ಕೂಗಿಕೊಂಡ ಮಹಿಳೆ ಹೊರಗಡೆ ಓಡಿ ಬಂದಾಗ ಜನರೆಲ್ಲ ಸೇರಿ ನಡೆದ ಘಟನೆ ತಿಳಿದು ಆರೋಪಿಯನ್ನು ಹಿಡಿಯಲು ಯತ್ನಿಸಿದರಾದರೂ ಆತ ಅಲ್ಲಿಂದ ಪರಾರಿಯಾದ.

ಪ್ರಕರಣದಲ್ಲಿರುವ ಯುವತಿ ವಿಧವೆಯಾಗಿದ್ದು ಕಳೆದ ವರ್ಷ ವಿಧವಾ ವೇತನ ಮಾಡಿಸಿಕೊಡುತ್ತೇನೆಂದು  ಆರೋಪಿ ಈಕೆಯ ಬೆನ್ನ ಹಿಂದೆ ಬಿದ್ದಿದ್ದ ಎಂಬ ಸುದ್ದಿಯೂ ಇದೀಗ ತಿಳಿದುಬಂದಿದೆ. ಮಾನಭಂಗ ಮತ್ತು ಜೀವ ಬೆದರಿಕೆ ಪ್ರಕರಣ ಗಂಗೊಳ್ಳಿ ಠಾಣೆಯಲ್ಲಿ ದಾಖಲಾಗಿದೆ. ದಾಖಲಾಗಿದೆ.

Exit mobile version