ಬೈಂದೂರು: ಮಡಗಾವ್ – ಮಂಗಳೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಜನರಲ್ ಬೋಗಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಂಗಳೂರಿನ ದಂಪತಿಗಳ ಬ್ಯಾಗ್‌ನಲ್ಲಿರಿಸಲಾಗಿದ್ದ ಲಕ್ಷಾಂತರ ರೂ. ಚಿನ್ನಾಭರಣಗಳು, ಮೊಬೈಲ್ ನಗದನ್ನು ಕಳವುಗೈದಿರುವ ಬಗ್ಗೆ ಬೈಂದೂರು ಠಾಣಯಲ್ಲಿ ತಡವಾಗಿ ದೂರು ದಾಖಲಾಗಿದೆ.
ಮಂಗಳೂರು ಬಾಲಕೃಷ್ಣ ಶ್ರೀಧರ ಪೈ ಅವರು ಮೇ 21ರಂದು ಮಡಗಾಂವ್ – ಮಂಗಳೂರು ಇಂಟರ್ ಸಿಟಿ ರೈಲು ಜನರಲ್ ಬೋಗಿಯಲ್ಲಿ ಕುಳಿತು ಕಾರವಾರದಿಂದ ಮಂಗಳೂರಿಗೆ ಪತ್ನಿಯೊಂದಿಗೆ ಪ್ರಯಾಣಿಸುತ್ತಿರುವಾಗ ಈ ಪ್ರಕರಣ ನಡೆದಿದೆ. ಎಲ್ಲ ಲಗೇಜುಗಳನ್ನು ಪತ್ನಿ ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿದ್ದು. ಬಾಲಕೃಷ್ಣ ಪೈ ಅವರ ಪತ್ನಿ ಕುಮಟಾ ರೈಲು ನಿಲ್ದಾಣ ಬಿಟ್ಟ ನಂತರ ಮಲಗಿದ್ದರು. ರೈಲು ಬೈಂದೂರು ನಿಲ್ದಾಣ ಬಿಟ್ಟ ಅನಂತರ ನಿದ್ರೆಯಿಂದ ಎದ್ದು ನೋಡಿದಾಗ ಅವರ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಈ ಬ್ಯಾಗ್‌ನಲ್ಲಿ 30 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸೂತ್ರ, ಚಿನ್ನದ ಕಿವಿಯ ಜುಮ್ಕಿ, ಚಿನ್ನದ ಕಿವಿಯ ರಿಂಗ್, ಪತ್ನಿಯ ಚಾಲನ ಪರವಾನಿಗೆ , ಮೊಬೆ„ಲ್, ಕನ್ನಡಕ, ಕೊಡೆ, ನಗದು ರೂ. 200 ಕಳವಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.